ಸ್ವದೇಶೀ ನಿರ್ಮಿತ ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿ ಪರೀಕ್ಷೆ ಯಶಸ್ವಿ 
ದೇಶ

ಸ್ವದೇಶೀ ನಿರ್ಮಿತ ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿ ಪರೀಕ್ಷೆ ಯಶಸ್ವಿ

ಸ್ವದೇಶೀ ನಿರ್ಮಿತ ಖಂಡಾಂತರ ಕ್ಷಿಪಣಿಯನ್ನು ಕೆಳ ಹಂತದಲ್ಲಿ ಹೊಡೆದುರುಳಿಸಬಲ್ಲ ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.

ಭುವನೇಶ್ವರ್: ಸ್ವದೇಶೀ ನಿರ್ಮಿತ ಖಂಡಾಂತರ ಕ್ಷಿಪಣಿಯನ್ನು ಕೆಳ ಹಂತದಲ್ಲಿ ಹೊಡೆದುರುಳಿಸಬಲ್ಲ   ಸೂಪರ್​ಸಾನಿಕ್​ ಇಂಟರ್​ಸೆಪ್ಟರ್​ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.
ಒಡಿಶಾದಲ್ಲಿರುವ ಅಬ್ದುಲ್​ ಕಲಾಂ ದ್ವೀಪದಲ್ಲಿ ಇಂದು ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು ಇದು ಅಡ್ವಾನ್ಸ್​ ಏರ್​ ಡಿಫೆನ್ಸ್​ನ ಭಾಗವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ
. ಈ ಹಿಂದೆಯೂ ಸಹ ಇದೇ ವರ್ಷ ಫೆಬ್ರವರಿ 11 ಮತ್ತು ಮಾರ್ಚ್​ 1 ರಂದು ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಆ ಎರಡು ಪರೀಕ್ಷೆಗಳೂ ಯಶಸ್ವಿಯಾಗಿದ್ದವು. ಇಂದಿನ ಕ್ಷಿಪಣಿ ಪರೀಕ್ಷೆಯಲ್ಲಿ ಹಲವು ಮಾನದಂಡಗಳ ಅಡಿಯಲ್ಲಿ ಪರಿಶೀಲನೆ ನಡೆದಿದ್ದು ಇದು ಸಹ ಅತ್ಯಂತ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಕ್ಷಿಪಣಿಯಲ್ಲಿ ನ್ಯಾವಿಗೇಷನ್​ ವ್ಯವಸ್ಥೆ, ಅತ್ಯಾಧುನಿಕ ಕಂಪ್ಯೂಟರ್​, ಎಲೆಕ್ಟ್ರೋ ಮೆಕಾನಿಕಲ್​ ಆಕ್ಟಿವೇಟರ್​ಗಳನ್ನು ಜೋಡಣೆ ಮಾಡಲಾಗಿದ್ದು ಕ್ಷಿಪಣಿಯು ಒಟ್ಟು 7.5 ಮೀಟರ್​ ಉದ್ದವಿದೆ. ವೈರಿ ರಾಷ್ಟ್ರಗಳ ದಾಳಿಯನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯ ಈ ಕ್ಷಿಪಣಿ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!