ಮುಂಬೈ: "ಮುಂಬೈ ಮಹಾನಗರಾದ ಲೋವರ್ ಪರೇಲ್‌ನ ಕಮಲಾ ಮಿಲ್ಸ್ ಆವರಣದಲ್ಲಿ ಉಂತಾದ ಅಗ್ನಿ ಅವಘಡಕ್ಕೆ ನಗರದಲ್ಲಿ ಹೆಚ್ಚು ವಲಸಿಗರಿರುವುದೇ ಕಾರಣ. ಜನಸಂಖ್ಯೆ ಹೆಚ್ಚಳದಿಂದಾಗಿ ಈ ಅಗ್ನಿ ದುರಂತ ಸಂಭವಿಸಿದೆ" ನಟಿ, ಬಿಜೆಪಿ ಸಂಸದೆ ಹೇಮ ಮಾಲಿನಿ ಹೇಳಿದ್ದಾರೆ. ಹೇಮಾ ಅವರ ಈ ಹೇಳಿಕೆ ಇದೀಗ ಹೊಸ ವಿವಾದವನ್ನು ಹುಟ್ಟು ಹಾಕಿದೆ.
"15 ಜೀವಗಳನ್ನು ಬಲಿ ತೆಗೆದುಕೊಂಡ ಅಗ್ನಿ ದುರಂತಕ್ಕೆ ಮುಂಬೈಗೆ ಆಗಮಿಸುವ ವಲಸಿಗರು ಕಾರಣ ಮುಂಬೈ ಮಹಾನಗರಕ್ಕೆ ದೇಶದೆಲ್ಲೆಡೆಯಿಂದ ವಲಸಿಗರು ಆಗಮಿಸುತ್ತಾರೆ. ಅವರೆಲ್ಲರೂ ಇಲ್ಲಿ ನೆಲೆ ಕಂಡುಕೊಂಡಿದ್ದು ಇತ್ತೀಚೆಗೆ ಮಹಾನಗರದಲ್ಲಿ ಜನಸಂಖ್ಯಾ ಬಾಹುಳ್ಯ ವಿಪರೀತವಾಗಿದೆ. ಇದಕ್ಕಾಗಿ ನಗರಪಾಲಿಕೆ ವಲಸಿಗರನ್ನು ನಿರ್ಬಂಧಿಸಲು ಕ್ರಮ ಕೈಗೊಲ್ಳಬೇಕಾಗಿತ್ತು " ಮಥುರಾ ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.
"ಎಲ್ಲಾ ನಗರಗಳಿಗೆ ಅದರದೇ ಆದ ಮಿತಿ ಇದೆ.ಜನಸಂಖ್ಯೆ ವಿಚಾರಕ್ಕೆ ಸಹ ಅದೇ ಮಿತಿ ಅನ್ವಯವಾಗುತ್ತದೆ. ಜನಸಂಖ್ಯೆ ಮಿತಿಮೀರಿದ್ದ ಪಕ್ಷದಲ್ಲಿ ಅಂತಹಾ ನಗರದ ಪಾಲಿಕೆಗಳು ವಲಸಿಗರು ಬೇರೆ ನಗರಕ್ಕೆ ಹೊರಡುವಂತೆ ಸೂಚಿಸಬೇಕು." ಹೇಮಾ ಮಾಲಿನಿ ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರ ಬಿಜೆಪಿ ನಾಯಕಿ ಶಾಯಿನಾ ಎನ್ ಸಿ ಮಾತನಾಡಿ "ಇದು ಬಹಳ ಸರಳವಾದ ವಾದವಾಯಿತು. ಆದರೆ ನಗರಪಾಲಿಕೆ ಈ ದುರಂತವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ಕಮಲಾ ಮಿಲ್ಸ್ ಆವರಣದೊಳಗಿನ ಅನಧಿಕೃತ, ಕಾನೂನು ಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿರುವುದೇ ಈ ದುರಂತಕ್ಕೆ ಮೂಲ. ಹೀಗೆ ಕಾನೂನು ಬಾಹಿರವಾಗಿ ಅನುಮತಿ ಇತ್ತವರನ್ನೇ ಈ ಘಟನೆಗೆ ಹೊಣೆಗಾರರನ್ನಾಗಿಸಬೇಕು" ಎಂದರು.
ಇನ್ನು ಹೇಮಾ ಮಾಲಿನಿ ಅವರ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಸದೆ ಸಂವೇದನಾ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos