ದೇಶ

ಉಗ್ರರ ಗಡಿ ಪ್ರವೇಶ ತಡೆಯಲು ಲೇಸರ್ ಬೇಲಿ ನಿರ್ಮಾಣಕ್ಕೆ 800 ಕೋಟಿ ಬಿಡುಗಡೆ

Vishwanath S

ನವದೆಹಲಿ: ಭಯೋತ್ಪಾದಕರು ಗಡಿ ನುಸುಳುವುದನ್ನು ತಡೆಯುವ ಸಲುವಾಗಿ ಗಡಿಯಲ್ಲಿ ಲೇಸರ್ ತಂತ್ರಜ್ಞಾನವನ್ನು ಅಳವಡಿಸಲು 800 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಉಗ್ರರು ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಗಡಿಯಲ್ಲಿ ಲೇಸರ್ ಬೇಲಿಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ 800 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಇದನ್ನು ಇಸ್ರೇಲ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌(ಐಐಎಂ) ಜಂಟಿಯಾಗಿ ನಿರ್ಮಿಸಲಿದೆ.

ಜಮ್ಮು, ಸಾಂಬಾ ಮತ್ತು ಕಥುವಾ 198 ಕಿ.ಮೀ ಉದ್ದದ ಅಂತಾರಾಷ್ಟ್ರೀಯ ಗಡಿಯಲ್ಲಿ ಹಂತ ಹಂತವಾಗಿ ಇದನ್ನು ಅಳವಡಿಸಲು ನಿರ್ಧರಿಸಲಾಗಿದೆ.

SCROLL FOR NEXT