ಸಂಗ್ರಹ ಚಿತ್ರ 
ದೇಶ

ಕಾಶ್ಮೀರ: ಪ್ರೇಮಿಗಳ ದಿನಾಚರಣೆಯಂದು ವಿಧ್ವಂಸಕ ಕೃತ್ಯಕ್ಕೆ ಎಲ್ಇಟಿ ಸಂಚು- ಗುಪ್ತಚರ ಇಲಾಖೆ ಎಚ್ಚರಿಕೆ

ಪ್ರೇಮಿಗಳ ದಿನಾಚರಣೆಯಂದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ...

ನವದೆಹಲಿ: ಪ್ರೇಮಿಗಳ ದಿನಾಚರಣೆಯಂದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಗಲು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ.

ಸಾಕಷ್ಟು ಒತ್ತಡದ ನಡುವೆ ಪಾಕಿಸ್ತಾನ ಸರ್ಕಾರ 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಉಗ್ರನಿಗೆ ಗೃಹ ಬಂಧನ ವಿಧಿಸಿದೆ. ಹಫೀಜ್ ಸಯೀದ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಬಹುಮುಖ್ಯ ನಾಯಕನಾಗಿದ್ದು. ಸಯೀದ್ ಗೃಹ ಬಂಧನ ಉಗ್ರರಿಗೆ ದೊಡ್ಡ ಹಿನ್ನಡೆಯುಂಟು ಮಾಡಿದಂತಾಗಿದೆ. ಈ ಬೆಳವಣಿಗೆಗಳು ಇದೀಗ ಉಗ್ರರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ತಮ್ಮ ಸಂಘಟನೆಯ ಬಲ ಹೆಚ್ಚಿಸಿಕೊಂಡು ಭಾರತದ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಲುವಾಗಿ ಉಗ್ರರು ಇತರೆ ಸಂಘಟನೆಗಳೊಂದಿಗೆ ಆರ್ಥಿಕ ನೆರವುಗಳನ್ನು ಕೇಳುತ್ತಿದ್ದಾರೆಂದು ತಿಳಿದುಬಂದಿದೆ.

ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಉಗ್ರ ಸಂಘಟನೆಗಳು ಇದಕ್ಕಾಗಿ ಪಾಕಿಸ್ತಾನ ಅರೆ ಸೇನಾ ಪಡೆಯೊಂದಿಗೆ ಕೈಜೋಡಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇನ್ನು ಗೃಹ ಬಂಧನದಲ್ಲಿದ್ದುಕೊಂಡೇ ಸಯೀದ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದು, ಪಾಕಿಸ್ತಾನ ತೋರ್ಪಡಿಸುವಿಕೆಗಾಗಿ ಗೃಹ ಬಂಧನ ವಿಧಿಸಿದೆ ಎಂಬುದು ಖಚಿತವಾಗುತ್ತಿದೆ.

ಕಾಶ್ಮೀರದಲ್ಲಿ ಫೆಬ್ರವರಿ 5 ರಂದು ವಾರ್ಷಿಕ ದಿನಾಚರಣೆಯೆಂದು ಪ್ರತೀವರ್ಷ ಆಚರಣೆ ಮಾಡಲಾಗುತ್ತದೆ. ಇದರಂತೆ ನಿನ್ನೆ ಕೂಡ ಕಾಶ್ಮೀರದಲ್ಲಿ ಎಲ್ಇಟಿ ಮತ್ತು ಜೆಯುಡಿ ಉಗ್ರ ಸಂಘಟನೆಗಳು ವಾರ್ಷಿಕ ವರ್ಷಾಚರಣೆಯನ್ನು ಮಾಡಿತ್ತು. ವರ್ಷಾಚರಣೆಯನ್ನುದ್ದೇಶಿ ಸಯೀದ್ ಹೇಳಿಕೆಯನ್ನು ನೀಡಿದ್ದು, ಭಾರತವನ್ನು ನಾಶಪಡಿಸುವಂತೆ ಕರೆ ನೀಡಿದ್ದಾನೆಂದು ತಿಳಿದುಬಂದಿದೆ.

ಕಾರ್ಯಕ್ರಮಕ್ಕೆ 40 ಹೆಚ್ಚು ವಿವಿಧ ಜಿಹಾದಿ ಸಂಘಟನೆಗಳು ಭಾಗಿಯಾಗಿದ್ದು, ಸಯೀದ್ ಕರೆಗೆ ಎಲ್ಲಾ ಉಗ್ರರು ಐಕಮತ್ಯ ಪ್ರದರ್ಶಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಂತೆ ಪ್ರೇಮಿಗಳ ದಿನಾಚರಣೆ ಹತ್ತಿರಬರುತ್ತಿದ್ದು, ಕಾಶ್ಮೀರದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಕಾಶ್ಮೀರದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಜನರನ್ನು ಹತ್ಯೆ ಮಾಡುವಂತೆ ಉಗ್ರರಿಗೆ ಕರೆ ನೀಡಲಾಗಿದೆ. ಇದಲ್ಲದೆ, ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಗಾವಲಿರಿಸುವಂತೆ ಉಗ್ರರಿಗೆ ತಿಳಿಸಲಾಗಿದ್ದು, ಪ್ರೇಮಿಗಳ ದಿನಾಚರಣೆ ಆಚರಿಸುವ ದೇಶಗಳ ಮೇಲೂ ದಾಳಿ ಮಾಡಿ ಹೊಸ ಅಭಿಯಾನವನ್ನು ಆರಂಭಿಸುವಂತೆ ತಿಳಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT