ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಭ್ರಷ್ಟಾಚಾರದ ವಿರುದ್ಧ ಧಾರ್ಮಿಕ ನಾಯಕರು, ಸಂತರು ಜಾಗೃತಿ ಮೂಡಿಸಬೇಕು: ಪ್ರಧಾನಿ

ದೇಶಕ್ಕೆ ಕಳಂಕ ತರುವ ಭ್ರಷ್ಟಾಚಾರ, ಕಪ್ಪುಹಣ ಸಂಗ್ರಹದ ವಿರುದ್ಧ ಧಾರ್ಮಿಕ ನಾಯಕರು, ಸಂತರು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ

ಮಧ್ವ ನವಮಿ ಕಾರ್ಯಕ್ರಮದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ
Srinivas Rao BV
Updated On : 6 Feb 2017, 1:49 am
ಉಡುಪಿ: ದೇಶಕ್ಕೆ ಕಳಂಕ ತರುವ ಭ್ರಷ್ಟಾಚಾರ, ಕಪ್ಪುಹಣ ಸಂಗ್ರಹದ ವಿರುದ್ಧ ಧಾರ್ಮಿಕ ನಾಯಕರು, ಸಂತರು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ಮಧ್ವ ನವಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಮಧ್ವ ಸಪ್ತ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಮಾನ್ಯ ಜನತೆಯೇ ದೇಶದ ನಿಜವಾದ ಶಕ್ತಿಯಾಗಿದ್ದು, ಪ್ರತಿಯೊಬ್ಬರೂ ದೇಶದ ಬದಲಾವಣೆಗಾಗಿ ಅದ್ಭುತ ಕೆಲಸಗಳನ್ನು ಮಾಡಬಹುದು ಎಂದು  ಹೇಳಿದ್ದಾರೆ. 
ಧಾರ್ಮಿಕ ಶ್ರದ್ಧೆಯ ಜೀವನ ನಡೆಸಲು ಎಲ್ಲರಿಗೂ ಸರಿಯಾದ ಮಾರ್ಗವನ್ನು ತಿಳಿಸುವ ಅಗತ್ಯವಿದೆ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನೀಡಿರುವ ವಿದ್ವಾಂಸರು, ಸಂತರು ಯುವ ಪೀಳಿಗೆಗೆ ದಾರಿ ದೀಪವಾಗಿದ್ದಾರೆ.  ಮತಾಂಧತೆ ಭಯಹುಟ್ಟಿಸುವ ಸಮಸ್ಯೆಗಳಿಗೆ ಇದೇ ಪರಿಕಲ್ಪನೆ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

Advertisement

Advertisement

ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಸೇರಿದಂತೆ ಶ್ರೇಷ್ಠ ವ್ಯಕ್ತಿಗಳು ಮಾನವ ನಿಷ್ಠೆ, ಮಾನವೀಯತೆಗೆ ಹೆಚ್ಚಿನ ಮಹತ್ವವನ್ನು ಸಾರಿದ್ದರು. ಇದೇ ತತ್ವಗಳು ಭಾರತದಾದ್ಯಂತ ಪಸರಿಸಿದವು. ನಂತರದಲ್ಲಿ ದಾಸ ಪಂಥದಲ್ಲಿ ಬಂದಂತಹ ತುಳಸಿದಾಸ, ಚೈತನ್ಯದೇವರು, ಗುರುನಾನಕ್, ರಮಾನಂದ, ಕಬೀರ್ ದಾಸ್, ಸೂರ್ ದಾಸ್ ರಂಥವರು ಸಹ ಸಮಾಜದ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯ ಪರಂಪರೆಯಲ್ಲಿ ವೃಕ್ಷಗಳನ್ನು ಪೂಜಿಸುವುದು ಮಾದರಿಯ ಪರಿಕಲ್ಪನೆಯಾಗಿದೆ. ನಮ್ಮ ಪೂರ್ವಜರು ಪರಿಸರದಲ್ಲಿಯೂ ಭಗವಂತನನ್ನು ಕಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ವ ನವಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಮಧ್ವ ಸಪ್ತ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಪರ್ಯಾಯ ಯತಿಗಳಾಗಿರುವ ವಿಶ್ವೇಶ ತೀರ್ಥ ಸ್ವಾಮಿಗಳು ಉಪಸ್ಥಿತರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments