ದೇಶ

39 ಸಾವಿರ ಕೋಟಿ ರೂ. ಬೆಲೆಯ ಸಹರಾ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಸ್ವಾಧೀನಕ್ಕೆ 'ಸುಪ್ರೀಂ' ಆದೇಶ

Vishwanath S
ನವದೆಹಲಿ: ಸಹರಾ ಮರುಪಾವತಿ ಪ್ರಕರಣ ಸಂಬಂಧ ಮಹಾರಾಷ್ಟ್ರದಲ್ಲಿನ ಲೊನಾವಾಲಾ ಬಳಿ ಇರುವ 39 ಸಾವಿರ ಕೋಟಿ ಮೊತ್ತದ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಸ್ವಾಧೀನಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. 
ಸಹರಾ ಮುಖ್ಯಸ್ಥ ಸುಬ್ರತೋ ರಾಯ್ ಅವರಿಗೆ ಮತ್ತೆ ಹಿನ್ನಡೆಯಾಗಿದ್ದು, ಸಹಾರಾ ಸಂಸ್ಧೆಯ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಅನ್ನು ಮೇಲ್ವಿಚಾರಣೆ ಅಡಿಯಲ್ಲಿ ಇಟ್ಟಿದ್ದು, ಫೆಬ್ರವರಿ 27ರವರೆಗಿನ ವಿಚಾರಣೆವರೆಗೂ ಯಾವುದೇ ವ್ಯವಹಾರಗಳನ್ನು ನಡೆಸದಂತೆ ಸಹಾರಾ ಗ್ರೂಪ್ ಗೆ ಸೂಚಿಸಿದೆ. 
ಅಲ್ಲದೆ, ದಾವೆ ಮತ್ತು ಅಡಮಾನದಿಂದ ಮುಕ್ತವಾಗಿರುವ ಪ್ರಾಪರ್ಟಿಯ ಪಟ್ಟಿ ನೀಡುವಂತೆ ಸೂಚಿಸಿದೆ. ಇದರಿಂದ ಮುಂದೆ ಪ್ರಾಪರ್ಟಿಯನ್ನು ಸಾರ್ವಜನಿಕವಾಗಿ ಹರಾಜು ಹಾಕಲು ಸುಲಭವಾಗುತ್ತದೆ ಎಂದು ಸಹಾರಾ ಗ್ರೂಪ್ ಗೆ ಸುಪ್ರೀಂ ಹೇಳಿದೆ. 
ಸೆಬಿಗೆ ಸುಮಾರು 14 ಸಾವಿರ ಕೋಟಿ ರುಪಾಯಿಯನ್ನು ಸಹಾರಾ ಗ್ರೂಪ್ ಸಂಸ್ಧೆ ನೀಡಬೇಕಿದೆ ಎಂದು ಸಹಾರಾ ಸುಪ್ರೀಂಕೋರ್ಟ್ ಮುಂದೆ ಒಪ್ಪಿಕೊಂಡಿದೆ. ಅಲ್ಲದೆ ಸುಮಾರಿ 11 ಸಾವಿರ ಕೋಟಿ ರೂಪಾಯಿಯನ್ನು ನೀಡಿರುವುದಾಗಿ ಸಹಾರಾ ಹೇಳಿದೆ.
SCROLL FOR NEXT