ದೇಶ

ಕೈಲಾಶ್ ಸತ್ಯಾರ್ಥಿಯವರ ಮನೆಯಿಂದ ನೊಬೆಲ್ ಪಾರಿತೋಶಕದ ಪ್ರತಿ ಸೇರಿ ಇತರ ವಸ್ತುಗಳು ಕಳವು

Sumana Upadhyaya
ನವದೆಹಲಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಕಳ್ಳತನವಾಗಿದೆ.
ಸತ್ಯರ್ಥಿಯವರು ಪ್ರಸ್ತುತ ಅಮೆರಿಕಾದಲ್ಲಿದ್ದಾರೆ. ಕಳ್ಳರು ದೋಚಿಕೊಂಡು ಹೋದ ವಸ್ತುಗಳಲ್ಲಿ ನೊಬೆಲ್ ಪಾರಿತೋಶಕದ ಪ್ರತಿಕೃತಿಯೂ ಸೇರಿದೆ. ಶಿಷ್ಟಾಚಾರದ ಅಂಗವಾಗಿ ಮೂಲ ನೊಬೆಲ್ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಇಡಲಾಗಿದೆ.
ನೊಬೆಲ್ ಪ್ರಶಸ್ತಿಯನ್ನು ಕಳವು ಮಾಡಲು ದರೋಡೆಕೋರರು ಯೋಚಿಸಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಐಪಿಸಿ ಸೆಕ್ಷನ್ 380ರಡಿ ಎಫ್ ಐಆರ್ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದರೋಡೆಕೋರರ ಬಂಧನಕ್ಕೆ ವ್ಯಾಪಕ ಶೋಧ ನಡೆಯುತ್ತಿದೆ. ಸ್ಥಳೀಯ ಆರೋಪಿಗಳು ಮತ್ತು ಚಿಂದಿ ವಸ್ತುಗಳ ಮಾರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಿಂದ ಅಪರಾಧ ಮತ್ತು ನ್ಯಾಯ ತಂಡಗಳು ಬೆರಳಚ್ಚು ಹಾಗೂ ಇತರ ಸಾಕ್ಷಿಗಳನ್ನು ಪಡೆದಿವೆ.
ದಕ್ಷಿಣ ದೆಹಲಿಯ ಅತ್ಯಂತ ಪ್ರತಿಷ್ಟಿತ ಅಲಕಾನಡ ಪ್ರದೇಶದಲ್ಲಿ ಸತ್ಯಾರ್ಥಿಯವರ ಮನೆಯಿದ್ದು ಅಲ್ಲಿ ಕಳ್ಳತನವಾಗಿರುವುದು ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕವನ್ನುಂಟುಮಾಡಿದೆ.
ಕಳೆದ ನವೆಂಬರ್ 29ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಮನೆಯಿಂದಲೂ ಹಲವು ವಸ್ತುಗಳು ಕಳ್ಳತನವಾಗಿದ್ದವು.
SCROLL FOR NEXT