ದೇಶ

ಬ್ಯಾಂಕ್ ಗಳಿಗೆ ಸಾಲಮರುಪಾವತಿಸದ ಮಲ್ಯ ಪ್ರಕರಣ: ಫೆಬ್ರವರಿ 10ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

Shilpa D

ನವದೆಹಲಿ: ಬ್ಯಾಂಕ್ ಗಳಿಂದ ಸಾಲ ಪಡೆದು ಮರುಪಾವತಿಸದ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ಫೆಬ್ರವರಿ 10ಕ್ಕೆ ತೀರ್ಪು ಕಾಯ್ದಿರಿಸಿದೆ.

ಪ್ರಕರಣ ಸಂಬಂಧ 11 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನುಇಂದು ಕೋರ್ಟ್ ನಡೆಸಿತು. ಈ ಎಲ್ಲಾ ಆರೋಪಿಗಳು ಐಡಿಬಿಐ ಮತ್ತು ಕಿಂಗ್ ಫಿಶರ್ ಏರ್ ಲೈನ್ಸ್ ನ ಉದ್ಯೋಗಿಗಳಾಗಿದ್ದಾರೆ.

ಐಡಿಬಿಐ ಬ್ಯಾಂಕ್ ಉದ್ಯೋಗಿಗಳು ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕಡಿಮೆ ಬಡ್ಡಿ ದರದಲ್ಲಿ 900 ಕೋಟಿ ರು ಸಾಲ ನೀಡಿರುವ ಪ್ರಕರಣ ಇದಾಗಿದೆ. ಐಡಿಬಿಐ ಸಿಬ್ಬಂದಿ  ಮಲ್ಯ ಅವರಿಗೆ ಸಾಲ ನೀಡಿರುವುದು ಕ್ರಿಮಿನಲ್ ಪ್ರಕರಣ ಆಗಿದೆ ಎಂದು ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದಾರೆ.


SCROLL FOR NEXT