ದೇಶ

ರಾಜಕೀಯ ಗೊಂದಲದಾಟದಲ್ಲಿ ಹುತಾತ್ಮ ಯೋಧನ ಮರೆತ ತಮಿಳುನಾಡು ಸರ್ಕಾರ!

Srinivasamurthy VN

ಚೆನ್ನೈ: ತಮಿಳುನಾಡು ರಾಜ್ಯ ತನ್ನ ರಾಜಕೀಯ ಗೊಂದಲದಿಂದಾಗಿ ಇಡೀ ದೇಶದ ಕೇಂದ್ರ ಬಿಂದುವಾಗಿದ್ದು, ರಾಜಕೀಯ ಮೇಲಾಟದಲ್ಲಿ ತಮಿಳು ನಾಡು ಸರ್ಕಾರ ತನ್ನ ನೆಲದ ವೀರಯೋಧನನ್ನೇ ಮರೆತಂತಿದೆ.

ಇತ್ತೀಚೆಗೆ ಕಾಶ್ಮೀರದಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಾವನ್ನಪ್ಪಿದ್ದ ತಮಿಳುನಾಡು ಮೂಲದ ವೀರ ಯೋಧ ನಾಯ್ಕ್ ತಿರುಪ್ಪಾಂಡಿ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಇಂದು ತಮಿಳುನಾಡಿನ ಚೆನ್ನೈನಲ್ಲಿ  ನೆರವೇರಿತು. ಆದರೆ ಯೋಧನ ಅಂತ್ಯ ಸಂಸ್ಕಾರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಲೂ ಅಥವಾ ಸಚಿವರಾಗಲೀ ಪಾಲ್ಗೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ.

54 ರಾಷ್ಟ್ರೀಯ ರೈಫಲ್ಸ್ ವಿಭಾಗದ (ಮದ್ರಾಸ್ ರೆಜಿಮೆಂಟ್) ಯೋಧರಾಗಿದ್ದ ತಿರುಪ್ಪಾಂಡಿ ಅವರ ಪಾರ್ಥೀವ ಶರೀರವನ್ನು ಇಂದು ಚೆನ್ನೈನಲ್ಲಿ ನೆರವೇರಿಸಲಾಯಿತು. ಅಂತ್ಯ ಸಂಸ್ಕಾರದಲ್ಲಿ ಲೆಫ್ಟಿನೆಂಟ್ ಜನರಲ್ ಆರ್ ಕೆ ಆನಂದ್,  ಕಾಂಚಿಪುರಂ ಜಿಲ್ಲಾಧಿಕಾರಿ ಆರ್ ಗಜಾಲಾ ಲಕ್ಷ್ಮಿ ಅವರು ಮಾತ್ರ ಸರ್ಕಾರದ ಪರವಾಗಿ ಪಾಲ್ಗೊಂಡಿದ್ದರು. ಆದರೆ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಕನಿಷ್ಠ ಪಕ್ಷ ಸ್ಥಳೀಯ ಶಾಸಕರೂ ಕೂಡ ತಿರುಪ್ಪಾಂಡಿ ಅಂತ್ಯ  ಸಂಸ್ಕಾರದಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಕಳೆದ ರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಯಿಂದಾಗಿ ಆಡಳಿತಾ ರೂಢ ಎಐಎಡಿಎಂಕೆ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡಿದ್ದು, ಸ್ವತಃ ಸಿಎಂ ಪನ್ನೀರ್ ಸೆಲ್ವಂ ಭಾವಿ ಮುಖ್ಯಮಂತ್ರಿ ಶಶಿಕಲಾ  ಅವರ ವಿರುದ್ಧ ಬಂಡಾಯವೆದಿದ್ದಾರೆ.

SCROLL FOR NEXT