ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು
ನವದೆಹಲಿ: ಕಳೆದ ಕೆಲ ದಿನಗಳಲ್ಲಿ ಅಸಹಜ ಚಟುವಟಿಕೆಗಳು ನಡೆದ ಬಗ್ಗೆ ವರದಿಯಾಗಿದ್ದು, ಇದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ರೈಲ್ವೆ ಹಳಿಯನ್ನು ನಾಶಗೊಳಿಸುವ ಮತ್ತು ಸ್ಫೋಟಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿಂದು ಪ್ರಶ್ನೆಗೆ ಉತ್ತರಿಸಿದ ಅವರು, ಏಳು ಸ್ಫೋಟ ಪ್ರಯತ್ನಗಳು ಮತ್ತು ಮೂರು ಕಡೆಗಳಲ್ಲಿ ರೈಲ್ವೆ ಹಳಿಗಳನ್ನು ನಾಶಗೊಳಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಳಿಗಳನ್ನು ನಾಶಗೊಳಿಸಿದ ಘಟನೆಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ತನಿಖೆ ನಡೆಸುತ್ತಿದೆ. ಕೆಲವು ಅಕ್ರಮ ಚಟುವಟಿಕೆಗಳನ್ನು ರೈಲ್ವೆ ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದ ತಪ್ಪಿಸಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು.
ಇತ್ತೀಚಿನ ರೈಲು ಹಳಿಗಳ ನಾಶದ ನಂತರ ಜಪಾನ್, ದಕ್ಷಿಣ ಕೊರಿಯಾ ಮತ್ತು ಇಟೆಲಿಗಳಿಂದ ತಂಡಗಳು ಆಗಮಿಸಿವೆ. ಪ್ರಧಾನಿಯವರ ರಾಜತಾಂತ್ರಿಕ ಕುಶಲತೆಗೆ ಧನ್ಯವಾದಗಳು ಎಂದರು.
ತಂತ್ರಜ್ಞಾನದ ಹೊರತಾಗಿ ರೈಲ್ವೆ ಸುರಕ್ಷಾ ಪಡೆಯನ್ನು ನ್ಯಾಯ ತಂತ್ರ ವಿಕಸನಕ್ಕೆ ಕೋರಲಾಗಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics