ಎಸ್ ಜೈಶಂಕರ್ 
ದೇಶ

ಪಾಕ್‌ ಭಯೋತ್ಪಾದನಾ ಕಾರ್ಖಾನೆ ಮುಚ್ಚುವ ಅಗತ್ಯವಿದೆ: ಜೈಶಂಕರ್‌

ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದ್ದು, ಪಾಕ್ ತನ್ನ ನೆಲದಲ್ಲಿರುವ ಭಯೋತ್ಪಾದನಾ...

ಮುಂಬೈ: ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗುತ್ತಿದ್ದು, ಪಾಕ್ ತನ್ನ ನೆಲದಲ್ಲಿರುವ ಭಯೋತ್ಪಾದನಾ ಕಾರ್ಖಾನೆಗಳನ್ನು ಮುಚ್ಚುವ ಅಗತ್ಯವಿದೆ ಎಂದು ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್‌ ಜೈಶಂಕರ್‌ ಅವರು ಮಂಗಳವಾರ ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗೇಟ್‌ ವೇ ಡಯಲಾಗ್‌ ಕಾರ್ಯಕ್ರಮದಲ್ಲಿ 'ರಾಜಕೀಯ ಬದಲಾವಣೆ ಮತ್ತು ಆರ್ಥಿಕ ಅಸ್ಥಿರತೆ' ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೈಶಂಕರ್‌ ಅವರು, 'ಭಾರತ ಸಾರ್ಕ್‌ ಅನ್ನು ಪೂರ್ತಿಯಾಗಿ ಕೈಬಿಟ್ಟಿಲ್ಲ, ಆದರೆ ಅದೇ ರೀತಿಯ ಪ್ರಾದೇಶಿಕ ಏಕತೆ, ಸಮಗ್ರತೆಯ ಅವಕಾಶಗಳನ್ನು ಶೋಧಿಸುತ್ತಿದೆ' ಎಂದು ಜೈಶಂಕರ್‌ ತಿಳಿಸಿದ್ದಾರೆ.
ಇದೇ ವೇಳೆ ಚೀನಾದೊಂದಿಗಿನ ಬಾಂಧವ್ಯದ ಕುರಿತಾಗಿ ಮಾತನಾಡಿದ ಜೈಶಂಕರ್‌, ಸಮಸ್ಯೆಗಳಿಗೆ ಹೆದರಿಕೊಂಡಿರುವುದರಿಂದ ಯಾವುದೇ ಪ್ರಯೋಜನವಿಲ್ಲ; ಉಭಯ ದೇಶಗಳೊಳಗಿನ ಬಾಂಧವ್ಯವನ್ನು ಇನ್ನಷ್ಟು ಸುಧಾರಿಸುವ ದಿಶೆಯಲ್ಲಿ ಯತ್ನಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!