ಗುವಾಹಟಿ: ಮಣಿಪುರ ವಿಧಾನ ಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಆ ಪಕ್ಷದ ಮುಖಂಡರೊಬ್ಬರು 36 ಕೋಟಿ ರು ಆಫರ್ ನೀಡಿದ್ದರು ಎಂದು ಇರೋಮ್ ಶರ್ಮಿಳಾ ಹೇಳಿದ್ದಾರೆ.
ಬಿಜೆಪಿ ಮೋರ್ಚಾ ಸಂಚಾಲಕ ಸುರ್ಬಿನೋಯ್ ಎಂಬುವರು ನನಗೆ 30 ಕೋಟಿ ರು ಆಫರ್ ನೀಡಿದ್ದರು ಎಂದು ಶರ್ಮಿಳಾ ದೂರಿದ್ದಾರೆ, ಆದರೆ ಶರ್ಮಿಳಾ ಅವರ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.
ನನ್ನ ಉಪವಾಸ ಮುಗಿದ ಬಳಿಕ, ನಾನು ಓರ್ವ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೆ ನಾನು ಚುನವಾಣೆಗೆ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆ. ಈ ವೇಳೆ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಹಣದ ಅವಶ್ಯಕತೆಯಿದೆ, ಚುನಾವಣೆ ಎದುರಿಸಲು ನಿಮಗೆ 36 ಕೋಟಿ ರು ಹಣದ ಅವಶ್ಯಕತೆಯಿದೆ. ನಿಮ್ಮಲ್ಲಿ ಅಷ್ಟು ಹಣ ಇದ್ದರೇ ಅದರಲ್ಲೇ ಸ್ಪರ್ಧಿಸಿ, ಇಲ್ಲದಿದ್ದರೇ ಕೇಂದ್ರ ಅದನ್ನು ನೀಡುತ್ತದೆ ಎಂದು ಸುರ್ಬಿನೋಯ್ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.
ನಾನು ಚುನಾವಣೆಗೆ ಸ್ಪರ್ಧಿಸಿದರೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾಗಿ ಶರ್ಮಿಳಾ ತಿಳಿಸಿದ್ದಾರೆ.
ಇನ್ನೂ ಶರ್ಮಿಳಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಶರ್ಮಿಳಾ ಆರೋಪ ನಿರಾಧಾರವಾದದ್ದು, ಯಾವೊಬ್ಬ ಬಿಜೆಪಿ ನಾಯಕರು ಹಣ ನೀಡುವುದಾಗಿ ಅವರಿಗೆ ಹೇಳಿದ್ದಾರೆ. ನಮ್ಮ ಬಳಿ 36 ಕೋಟಿ ರು ಹಣವಿಲ್ಲ ಎಂದು ಮಣಿಪುರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ತೊಂಗಮ್ ಬಿಸ್ವಜಿತ್ ಹೇಳಿದ್ದಾರೆ.