9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಕೃಷ್ಣ ನಗರ: 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ 35 ವರ್ಷದ ವ್ಯಕ್ತಿಗೆ ಪಶ್ಚಿಮ ಬಂಗಾಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ತೀರ್ಪನ್ನು ಫೆ.16 ರಂದು ಪ್ರಕಟಿಸಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಜುಮುತ್ ಬಹಾನ್ ಬಿಸ್ವಾಸ್ ಅಪರಾಧಿ ದಿನೇಶ್ ಚಂದ್ರ ದಾಸ್ ಗೆ ಫೆ.17 ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಶೇ.80 ರಷ್ಟು ಮೊತ್ತವನ್ನು ಸಂತ್ರಸ್ತೆಗೆ ಪರಿಹಾರ ಧನವಾಗಿ ನೀಡಲಾಗುತ್ತದೆ.
ಸಂತ್ರಸ್ತ ಬಾಲಕಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲು ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶ ನೀಡಿದ್ದು, 30 ದಿನಗಳ ಒಳಗಾಗಿ ಆದೇಶ ಜಾರಿಗೆ ಬರಬೇಕೆಂದು ಸೂಚಿಸಿದೆ. 9 ವರ್ಷದ ಬಾಲಕಿಯನ್ನು ಜನಸಂಚಾರವಿಲ್ಲದ ಪ್ರದೇಶಕ್ಕೆ ಕರೆದೊಯ್ದಿದ್ದ ದಿನೇಶ್ ಚಂದ್ರ ದಾಸ್ ಅತ್ಯಾಚಾರ ಮಾಡಿದ್ದ, ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics