ದೇಶ

ವೀಸಾ ಅವಧಿ ವಿಸ್ತರಣೆಗೆ ಪಾಕಿಸ್ತಾನಿ ಪ್ರಜೆ ಮಾಡಿದ್ದ ಕೋರಿಕೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Sumana Upadhyaya
ನವದೆಹಲಿ: ಭಾರತದಲ್ಲಿ ಇನ್ನು ಸ್ವಲ್ಪ ಸಮಯಗಳವರೆಗೆ ವಾಸಿಸಲು ವೀಸಾ ಅವಧಿಯನ್ನು ವಿಸ್ತರಿಸುವಂತೆ ಪಾಕಿಸ್ತಾನ ಪ್ರಜೆಯೊಬ್ಬ ಮಾಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.ಇದು ಕಾರ್ಯಾಂಗಕ್ಕೆ ಸಂಬಂಧಪಟ್ಟ ವಿಷಯ ಎಂದು ಅದು ಹೇಳಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಸೂಫಿ ಪಾದ್ರಿ ಸೈಯದ್ ವಾಸೀಮ್ ರೆಹಮಾನ್ ಮತ್ತು ಅವರ ಪತ್ನಿ ಭಾರತ ಬಿಟ್ಟು ಹೋಗುವಂತೆ ಮುಂಬೈ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಅಲ್ಲಿ ಕೂಡ ಅವರ ಮನವಿ ತಿರಸ್ಕಾರಗೊಂಡಿದೆ.
ವೀಸಾ ವಿಸ್ತರಣೆ ವಿಷಯ ಕಾರ್ಯಾಂಗಕ್ಕೆ ಬಿಟ್ಟಿದ್ದು. ಸರ್ಕಾರ ವೀಸಾ ವಿಸ್ತರಣೆ ಮಾಡದಿದ್ದರೆ ನಮಗೆ ಮಾಡಲು ಬರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸಹಾನುಭೂತಿಯ ನೆಲೆಯಲ್ಲಿ ರೆಹಮಾನ್ ಮತ್ತು ಅವರ ಪತ್ನಿಗೆ ಇನ್ನು ಕೆಲ ಸಮಯ ಭಾರತದಲ್ಲಿರಲು ಅವಕಾಶ ಮಾಡಿಕೊಡಬೇಕು. ಸೂಫಿ ತತ್ವವನ್ನು ಅನುಸರಿಸುತ್ತಿರುವ ಅವರಿಗೆ ಪಾಕಿಸ್ತಾನದಲ್ಲಿ ಜೀವಬೆದರಿಕೆಯಿದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
SCROLL FOR NEXT