ದೇಶ

ಹಣ ವರ್ಗಾವಣೆ ಪ್ರಕರಣ: 2005ರ ದೆಹಲಿ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್‌ ದಾರ್‌ಗೆ ಜಾಮೀನು

Vishwanath S
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2005ರ ದೆಹಲಿ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್‌ ತಾರೀಕ್ ಅಹ್ಮದ್ ದಾರ್ ಗೆ ಜಾಮೀನು ಸಿಕ್ಕಿದೆ. 
25 ಸಾವಿರ ವೈಯಕ್ತಿಕ ಬಾಂಡ್ ನೊಂದಿಗೆ ಕೋರ್ಟ್ ತಾರೀಕ್ ಅಹ್ಮದ್ ದಾರ್ ಗೆ ಜಾಮೀನು ಮಂಜೂರು ಮಾಡಿದೆ. 
ಹಣ ಚಲಾವಣೆ ತಡೆಗಟ್ಟುವಿಕೆ ಕಾಯ್ದೆಯಡಿ ದಾರ್ ವಿರುದ್ಧ ಮೊಕದ್ದಮೆ ಅವರ ಮೇಲಿದ್ದು, ಹೀಗಾಗಿ ಜಾಮೀನು ಸಿಕ್ಕರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. 
2005ರ ದೆಹಲಿ ಸರಣಿ ಸ್ಫೋಟ ಪ್ರಕರಣ ಸಂಬಂಧ 2008ರಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ವಿದೇಶಿ ಹಣ ಪಡೆದಿರುವುದಾಗಿ ದಾರ್ ವಿರುದ್ಧ ಹಣ ಚಲಾವಣೆ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 
2005ರ ಅಕ್ಟೋಬರ್ 20ರಂದು ದೆಹಲಿಯ ಸರೋಜಿನಿ ನಗರ, ಕಾಲ್ಕಾಜಿ ಹಾಗೂ ಪಹರ್ ಗಂಜ್ ಗಳಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲಿ 67 ಜನರು ಮೃತಪಟ್ಟಿದ್ದು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 
SCROLL FOR NEXT