ದೇಶ

ಇಂದಿನಿಂದ ಉಳಿತಾಯ ಖಾತೆದಾರರು ವಾರಕ್ಕೆ 50 ಸಾವಿರ ರು. ವಿತ್ ಡ್ರಾ ಮಾಡಬಹುದು!

Vishwanath S
ನವದೆಹಲಿ: ನೋಟು ನಿಷೇಧದ ಬಳಿಕ ಸಾರ್ವಜನಿಕ ವಲಯದಲ್ಲಿ ಉಂಟಾದ ತೊಂದರೆಯನ್ನು ತಪ್ಪಿಸಲು ಹಂತ ಹಂತವಾಗಿ ಕ್ರಮ ಕೈಗೊಂಡಿರುವ ಆರ್‍ಬಿಐ ಇದೀಗ ಉಳಿತಾಯ ಖಾತೆಯಿಂದ 50 ಸಾವಿರ ರುಪಾಯಿ ನಗದು ಡ್ರಾ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. 
ಉಳಿತಾಯ ಖಾತೆದಾರರು ತಮ್ಮ ಅಕೌಂಟ್ ನಿಂದ ವಾರಕ್ಕೆ 24 ಸಾವಿರ ಮಾತ್ರ ತೆಗೆದುಕೊಳ್ಳಬಹುದಿತ್ತು. ಇದೀಗ ಈ ಮಿತಿಯನ್ನು 50 ಸಾವಿರಕ್ಕೆ ಏರಿಸಲಾಗಿದೆ ಎಂದು ಆರ್‍ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
ನವೆಂಬರ್ 8 ರಂದು 500, 1000 ಮುಖಬೆಲೆಯ ನೋಟುಗಳು ನಿಷೇಧಗೊಂಡಿದ್ದು ಬಳಿಕ ದೇಶದಲ್ಲಿ ದುಡ್ಡಿದಾಗಿ ಜನರು ಪರಿತಪಿಸುವಂತಾಗಿತ್ತು. ಹಂತ ಹಂತವಾಗಿ ಸಮಸ್ಯೆ ನಿವಾರಣೆಯಾಗಿದ್ದು ಮಾರ್ಚ್ 13ರಿಂದ ಉಳಿತಾಯ ಖಾತೆಯಿಂದ ನಗದು ಪಡೆಯಲು ಯಾವುದೇ ಮಿತಿ ಇರುವುದಿಲ್ಲ.
SCROLL FOR NEXT