ಕಮಲ್ ಹಾಸನ್-ಸುಬ್ರಮಣಿಯನ್ ಸ್ವಾಮಿ
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಒಬ್ಬ ಮೂಳೆಗಳಿಲ್ಲದ ಅದ್ಭುತ ಮತ್ತು ಸ್ವಪ್ರತಿಷ್ಠೆಯ ಮೂರ್ಖ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟರ್ ನಲ್ಲಿ ಜರಿದಿದ್ದಾರೆ.
ಸತೀಶ್ ಸಾಹಾ ಎಂಬಾತ ಟ್ವೀಟರ್ ನಲ್ಲಿ ಕಮಲ್ ಹಾಸನ್ ಕುರಿತಂತೆ ಪೋಲ್ ಕ್ವಷನ್ ಕೇಳಿದ್ದರು. ಬಿಜೆಪಿಗೆ ಕಮಲ್ ಹಾಸನ್ ಬಂದರೆ ನೀವು ಸ್ವೀಕರಿಸುತ್ತೀರಾ? ಅವರ ಇಷ್ಟದಂತೆ ಸರ್ಕಾರ ನಡೆಸಲು ಬಿಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ರೀಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ ಬಿಜೆಪಿ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಾನಂತು ಮೂಳೆಗಳಿಲ್ಲದ ಅದ್ಭುತ ಮತ್ತು ಸ್ವಪ್ರತಿಷ್ಠೆಯ ಮೂರ್ಖ ಕಮಲ್ ಹಾಸನ್ ರನ್ನು ನಿರಾಕರಿಸುತ್ತೇನೆ ಎಂದಿದ್ದಾರೆ.
ಕಳೆದ ತಿಂಗಳು ಜಲ್ಲಿಕಟ್ಟು ಕುರಿತಂತೆ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುಬ್ರಮಣಿಯನ್ ಸ್ವಾಮಿ ಕಮಲ್ ವಿವೇಚನೆ ಇಲ್ಲದವರು ಎಂದು ಜರಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics