ನವದೆಹಲಿ: ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಸೆಮಿನಾರ್ ಗೆ ದೇಶ ವಿರೋಧಿ ಘೋಷಣೆ ಆರೋಪಿಗಳಾದ ಜವಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಮರ್ ಖಲಿದ್ ಮತ್ತು ರಶೀದ್ ಗೆ ಆಹ್ವಾನ ನೀಡಿದ್ದಕ್ಕೆ ಕಾಲೇಜು ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದಿ ವಾರ್ ಇನ್ ಆದಿವಾಸಿಸ್ ಏರಿಯಾಸ್ ವಿಷಯದಲ್ಲಿ ಖಲೀದ್ ಜೆಎನ್ಯು ಕಾಲೇಜಿನಲ್ಲಿ ಪಿಹೆಚ್ಡಿ ಮಾಡುತ್ತಿದ್ದು ಇದೇ ವಿಷಯವಾಗಿ ಮಾತನಾಡಲು ದೆಹಲಿ ರಾಮ್ಜಾಸ್ ಕಾಲೇಜಿನ ಸಾಹಿತ್ಯ ಸಮಾಜ ಆತನನ್ನು ಆಹ್ವಾನಿಸಿತ್ತು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಪ್ರತಿಭಟನೆ ನಡೆಸಿತ್ತು.
ಈ ವೇಳೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು ಮತ್ತು ಎಬಿವಿಬಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆಸಿದೆ. ಈ ಸಂದರ್ಭದಲ್ಲಿ ಉಭಯ ವಿದ್ಯಾರ್ಥಿ ಸಂಘಟನೆಗಳ ನಡುವೆ ಕೈ ಕೈ ಮಿಲಾಯಿಸಿದರು. ಪೊಲೀಸರು ಮಧ್ಯಪ್ರವೇಶಿಸಿದರು ಸಂಘಟನೆ ವಿದ್ಯಾರ್ಥಿಗಳು ಹಿಮ್ಮೆಟ್ಟಲಿಲ್ಲ. ಇದರಿಂದಾಗಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಉಮರ್ ಖಾಲಿದ್ ಆಹ್ವಾನ ಸಂಬಂಧ ಪ್ರತಿಭಟನೆಗಳು ನಡೆದ ಹಿನ್ನೆಲೆ ಸೆಮಿನಾರ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.