ಉದ್ಯಮಿ ವಿಜಯ್ ಮಲ್ಯ 
ದೇಶ

ನನ್ನನ್ನು ಹಸ್ತಾಂತರಿಸಲು ಬ್ರಿಟನ್ ಗೆ ಭಾರತ ಕೇಳುವಂತಿಲ್ಲ: ವಿಜಯ್ ಮಲ್ಯ

ನನ್ನನ್ನು ಹಸ್ತಾಂತರಿಸುವಂತೆ ಬ್ರಿಟನ್ ರಾಷ್ಟ್ರಕ್ಕೆ ಭಾರತ ಕೇಳುವಂತಿಲ್ಲ, ಯಾವುದೇ ಕಾರಣಕ್ಕೂ ನಾನು ಬ್ರಿಟನ್ ರಾಷ್ಟ್ರದಿಂದ ಹೊರನಡೆಯುವುದಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಗುರುವಾರ...

ಇಂಗ್ಲೆಂಡ್: ನನ್ನನ್ನು ಹಸ್ತಾಂತರಿಸುವಂತೆ ಬ್ರಿಟನ್ ರಾಷ್ಟ್ರಕ್ಕೆ ಭಾರತ ಕೇಳುವಂತಿಲ್ಲ, ಯಾವುದೇ ಕಾರಣಕ್ಕೂ ನಾನು ಬ್ರಿಟನ್ ರಾಷ್ಟ್ರದಿಂದ ಹೊರನಡೆಯುವುದಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಗುರುವಾರ ಹೇಳಿದ್ದಾರೆ.

ಸಾವಿರಾರು ಕೋಟಿಗಳ ಸಾಲ ಪಡೆದು ಭಾರತೀಯ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಜಯ್ ಮಲ್ಯವನ್ನು ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಬಳಿ ಮನವಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು.

ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಮಲ್ಯ ಅವರು, ಬ್ರಿಟನ್ ದೇಶವನ್ನು ತೊರೆಯುವುದಿಲ್ಲ. ನನ್ನನ್ನು ಹಸ್ತಾಂತರ ಮಾಡುವಂತೆ ಭಾರತ ಯಾವುದೇ ಆಧಾರದ ಮೇಲೂ ಬ್ರಿಟನ್ ಬಳಿ ಕೇಳುವಂತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಮಲ್ಯ ಅವರು, ನಾನು ಒಂದೂ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಭಾರತದ ಸರ್ಕಾರೇತರ ಬ್ಯಾಂಕ್ ಗಳು ತಮ್ಮ ವೈಫಲ್ಯಗಳನ್ನು ನನ್ನ ಮೇಲೆ ಹೊರಿಸಲು ಯತ್ನಗಳನ್ನು ನಡೆಸುತ್ತಿವೆ.  ನಾನು ಅವರ ಆರೋಪಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ, ಸಾಲ ಮರುಪಾವತಿ ವಿಚಾರ ಸಿವಿಲ್ ಪ್ರಕರಣ ಆಗಿದ್ದರೂ ಸರ್ಕಾರದ ಪರವಾಗಿ ತನಿಖೆ ನಡೆಸುತ್ತಿರುವ ಸಿಬಿಐ ಅದನ್ನು ಅಪರಾಧ ಪ್ರಕರಣವನ್ನಾಗಿ ಮಾಡಿ ಬ್ಯಾಂಕ್ ಗಳಿಗೆ ಮೋಸ ಮಾಡಿದ್ದೇನೆಂದು ಪ್ರಕರಣಗಳನ್ನು ದಾಖಲಿಸುತ್ತಿವೆ. ಎಲ್ಲವನ್ನೂ ನಾನು ಎದುರಿಸಲು ಸಿದ್ಧನಿದ್ದೇನೆ. ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ. ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂಬುದು ನನ್ನ ದೃಢ ನಂಬಿಕೆಯಾಗಿದೆ.

ನನ್ನ ವಿರುದ್ಧ ಪ್ರಕರಣಗಳಿವೆ ಎಂದು ಹೇಳುತ್ತಿರುವ ಭಾರತದ ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಒದಗಿಸಲಿ. ಅವರ ಬಳಿ ಸಾಕ್ಷ್ಯಾಧಾರಗಳಿರುವ ಬಗ್ಗೆಯೇ ನನಗೆ ಅನುಮಾನಗಳಿವೆ. ನಾನಿಲ್ಲಿ ಸುರಕ್ಷಿತನಾಗಿದ್ದೇನೆ. ಬ್ರಿಟನ್ ದೇಶವನ್ನು ತೊರೆಯಲಾರೆ, ನಾನು ತಪ್ಪಿತಸ್ಥ ಎಂದು ಸಾಬೀತಾಗುವವರೆಗೂ ಬ್ರಿಟನ್ ಕಾನೂನು ವ್ಯವಸ್ಥೆಯಡಿಯಲ್ಲಿ ನಾನು ಸುರಕ್ಷಿತವಾಗಿರುತ್ತೇನೆ. ಭಾರತ ಸರ್ಕಾರದಲ್ಲಿರುವ ಕೆಲವು ಸ್ವೇಚ್ಛಾಭಿಪ್ರಾಯದ ವ್ಯಕ್ತಿಗಳ ಅಡಿಯಲ್ಲಿ ಇರುವುದು ನನಗೆ ಇಷ್ಟವಿಲ್ಲ. ಅಲ್ಲಿ ಬಂದು ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ಇಲ್ಲಿರುವುದೇ ಉತ್ತಮ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!