ಸಾಂದರ್ಭಿಕ ಚಿತ್ರ 
ದೇಶ

ಜಗಳದಲ್ಲಿ ಗರ್ಭಿಣಿಗೆ ಒದ್ದು ಮಗು ಸಾವು: ಬಿಜೆಪಿ ಮುಖಂಡ ಸೇರಿ ಐವರ ಬಂಧನ

ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ...

ಕೃಷ್ಣನಗರ: ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಕೃಷ್ಣನಗರ್ ಎಂಬಲ್ಲಿ ನಡೆದಿದೆ.

ನಾಡಿಯಾ ಜಿಲ್ಲೆಯಲ್ಲಿ  ನಿನ್ನೆ ರಾತ್ರಿ ಕೀರ್ತನ್ ಸಮಾರಂಭ ನಡೆಯುತ್ತಿತ್ತು, ಈ ವೇಳೆ ಧ್ವನಿ ವರ್ಧಕವನ್ನು ಜೋರಾಗಿ ಹಾಕಲಾಗಿತ್ತು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಶಂಭು ಚಂದ್ರ ದಾಸ್ ಎಂಬಾತನ ವಿರುದ್ಧ ಪ್ರತಿಭಟನೆ ನಡೆಸಿ ಆತನ ಮೇಲೆ ಹಲ್ಲೆ ಮಾಡಲಾಗಿತ್ತು.

ಈ ವೇಳೆ  ಆತನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಆತನ ಅತ್ತಿಗೆ ಮಾಯಾರಾಣಿ ಸಂತ್ರಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ನಡೆದ ಜಗಳದಲ್ಲಿ ಆಕೆಯ ಹೊಟ್ಟೆಗೆ ಒದೆಯಲಾಗಿದೆ. ಇದರಿಂದ ಆಕೆ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಮೊದಲಿಗೆ ಆಕೆಯನ್ನು ದುಬಾಲಿಯಾ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಕೃಷ್ಣನಗರ್ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಹೊಟ್ಟೆಯಲ್ಲಿದ್ದ ಮಗು ಈ ವೇಳೆ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಸ್ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT