ನವದೆಹಲಿ: ಸರ್ಕಾರಿ ಪೂರೈಕೆ ವ್ಯಾಪ್ತಿಯಲ್ಲಿರುವ ಶೇ.10 ರಷ್ಟು ಔಷಧಗಳು ಕಳಪೆ ದರ್ಜೆಯದ್ದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನಡೆಸಿರುವ ಸಮೀಕ್ಷೆಯ ಮೂಲಕ ತಿಳಿದುಬಂದಿದೆ.
ಭಾರತದಲ್ಲಿ ಒಟ್ಟಾರೆ ಮಾರಾಟವಾಗುವ ಔಷಧಗಳಲ್ಲಿ 47,012 ಪೈಕಿ 1,850 ಸ್ಯಾಪಲ್ ಗಳು ಕೆಳದರ್ಜೆಯ ಔಷಧಗಳಾಗಿದ್ದರೆ 13 ನಕಲಿ ಔಷಧಗಳಿವೆ. ಅಂದರೆ ಶೇ.3.16 ರಷ್ಟು ಔಷಧಗಳು ಕಳಪೆ ದರ್ಜೆಯದ್ದಾಗಿದ್ದು, 0.0245 ರಷ್ಟು ನಕಲಿ ಔಷಧಗಳಿವೆ ಎಂದು ಆರೋಗ್ಯ ಇಲಾಖೆ ನಡೆಸಿರುವ ಸಮೀಕ್ಷೆ ಮೂಲಕ ತಿಳಿದುಬಂದಿದೆ.
ಸರ್ಕಾರಿ ಪೂರೈಕೆಯಲ್ಲಿರುವ ಔಷಧಗಳನ್ನು ಪ್ರಮೋಟ್ ಮಾಡುವುದಕ್ಕೂ ಮುನ್ನ ಗುಣಮಟ್ಟವನ್ನು ಸರಿಯಾಗಿ ಪರೀಕ್ಷೆ ಮಾಡಲಾಗುತ್ತಿಲ್ಲ. ಇದು ಚಿಲ್ಲರೆ ಮಳಿಗೆಗಳಲ್ಲಿರುವುದಕ್ಕಿಂತ 3 ರಷ್ಟು ಹೆಚ್ಚಿದೆ ಎಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ. 23 ಡೋಸೇಜ್ ಫಾರ್ಮ್ ಗಳಿಗೆ ಸಂಬಂಧಿಸಿದ 47,954 ಔಷಧಗಳ ಮಾದರಿಯನ್ನು 36 ರಾಜ್ಯಗಳ 654 ಜಿಲ್ಲೆಗಳಿಂದ ತರಿಸಲಾಗಿದ್ದು, ರೀಟೇಲ್ ಮಳಿಗೆಗಳಿಂದಲೂ ಮಾದರಿಗಳನ್ನು ತರಿಸಲಾಗಿದೆ. ಮಾದರಿಗಳ ಪರೀಕ್ಷೆ ವೇಳೆಯಲ್ಲಿ ಸರ್ಕಾರಿ ಪೂರೈಕೆ ವ್ಯಾಪ್ತಿಯಲ್ಲಿರುವ ಶೇ.10 ರಷ್ಟು ಔಷಧಗಳು ಕಳಪೆ ದರ್ಜೆಯದ್ದಾಗಿದೆ ಎಂಬ ಅಂಶ ಬಹಿರಂಗವಾಗಿದೆ.