ಸಂಗ್ರಹ ಚಿತ್ರ 
ದೇಶ

ಎಸ್ ಬಿಐ ಎಟಿಎಂಗೆ 2000 ರು.ನಕಲಿ ನೋಟು ತುಂಬಿದ್ದ ವ್ಯಕ್ತಿಯ ಗುರುತು ಪತ್ತೆ!

ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಎಸ್ ಬಿಐ ಎಟಿಎಂ ನಲ್ಲಿ 2000 ರು. ನಕಲಿ ನೋಟು ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಎಟಿಎಂಗೆ ನಕಲಿ ನೋಟು ತುಂಬಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.

ದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಎಸ್ ಬಿಐ ಎಟಿಎಂ ನಲ್ಲಿ 2000 ರು. ನಕಲಿ ನೋಟು ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಎಟಿಎಂಗೆ ನಕಲಿ ನೋಟು ತುಂಬಿದ್ದ ವ್ಯಕ್ತಿಯನ್ನು ಪೊಲೀಸರು  ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.

ಆರ್ ಬಿಐ ನೀಡಿದ್ದ ಹಣಕ್ಕೆ ಬದಲಾಗಿ ನಕಲಿ ನೋಟುಗಳನ್ನು ಎಟಿಎಂಗೆ ಹಾಕಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಎಟಿಎಂಗೆ ಹಣ ತುಂಬಿಸಲು ಬಂದಿದ್ದ  ವ್ಯಕ್ತಿಯೇ ಅಸಲಿ ನೋಟುಗಳಿಗೆ ಬದಲಾಗಿ ನಕಲಿ ನೋಟುಗಳನ್ನು ತುಂಬಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಕಾರಣಕ್ಕೆ ಕಳೆದ ಫೆಬ್ರವರಿ 6ರಂದು ನಕಲಿ ನೋಟುಗಳು ಎಟಿಎಂ ನಿಂದ ಬಂದಿತ್ತು ಎಂದು ಪೊಲೀಸರು  ತಿಳಿಸಿದ್ದಾರೆ.

ಏನಿದು ಘಟನೆ?
ಫೆಬ್ರವರಿ 6 ರಂದು ರೋಹಿತ್ ಎಂಬುವವರು ದೆಹಲಿಯ ಛತ್ತರ್​ಪುರ್​ನಲ್ಲಿರುವ ಎಸ್​ಬಿಐ ಬ್ಯಾಂಕಿನ ಎಟಿಎಂನಲ್ಲಿ 8000 ರೂ. ಹಣ ಡ್ರಾ ಮಾಡಿದ್ದರು. ಆದರೆ ಎಟಿಎಂನಿಂದ ಅವರಿಗೆ ದೊರೆತ ನೋಟುಗಳೆಲ್ಲವೂ  ನಕಲಿಯಾಗಿದ್ದವು. ಮಕ್ಕಳು ಆಟವಾಡಲು ಬಳಸುವ ‘ಚಿಲನ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಮುದ್ರೆಯಿದ್ದ ಹೊಸ 2000 ರೂ. ನೋಟುಗಳನ್ನೇ ಹೋಲುವ ನೋಟುಗಳನ್ನು ಎಟಿಎಂ ಅವರಿಗೆ ನೀಡಿತ್ತು. ಈ ಸಂಬಂಧ ರೋಹಿತ್  ಬ್ಯಾಂಕಿನ ಕಸ್ಟಮರ್ ಕೇರ್​ಗೆ ಕರೆ ಮಾಡಿ ದೂರು ನೀಡಿದ್ದರು. ನಂತರ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು.

ಚೆಕ್ ಮಾಡಲು ಬಂದ ಪೊಲೀಸ್ ಅಧಿಕಾರಿಗೇ 2000 ರು.ನಷ್ಟ
ಇನ್ನು ರೋಹಿತ್ ನೀಡಿದ ದೂರಿನ ಅನ್ವಯ ಎಟಿಎಂ ಅನ್ನು ಪರೀಕ್ಷೆಗೆ ಒಳಪಡಿಸಲು ಬಂದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರ್ಡ್ ನಿಂದ 2 ಸಾವಿರ ರುಯ ಡ್ರಾಮಾಡಿದ್ದಾರೆ. ಆಗ ಅವರಿಗೂ ನಕಲಿ ನೋಟು ಬಂದಿದ್ದು,.  ಖಾತೆಯಿಂದ 2 ಸಾವಿರು ವಿತ್ ಡ್ರಾ ಆಗಿರುವ ಕುರಿತು ಮಾಹಿತಿ ಬಂದಿದೆ. ಅದರಂತೆ ಪರೀಕ್ಷೆಗೆ ಬಂದ ಪೊಲೀಸ್ ಅಧಿಕಾರಿ ಕೂಡ 2000 ರು. ಕಳೆದುಕೊಳ್ಳುವಂತಾಗಿತ್ತು. ಇನ್ನು ಈ ಬಗ್ಗೆ ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿಚಿ  ನೀಡಿದ ಪೊಲೀಸರು, ನೋಟಿನ ಕಂತೆಯಲ್ಲಿ ಕೆಲವು ನೋಟುಗಳು ಮಾತ್ರ ನಕಲಿ ಇದ್ದವು, ಉಳಿದ ನೋಟುಗಳು ಅಸಲಿಯಾಗಿದ್ದವು. ತಕ್ಷಣ ಎಟಿಎಂನಲ್ಲಿದ್ದ ಎಲ್ಲಾ ನೋಟುಗಳನ್ನು ಹಿಂಪಡೆಯುವಂತೆ ನಾವು ಬ್ಯಾಂಕಿಗೆ  ಸೂಚಿಸಿದೆವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 489-ಬಿ, 489-ಸಿ ಮತ್ತು 420 ಕಾಯ್ದೆಯಡಿಯಲ್ಲಿ ದೂರುದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್