ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ 
ದೇಶ

ಪುಣೆ ವಿವಿಯಲ್ಲಿ ಎಬಿವಿಪಿ, ಎಸ್'ಎಫ್ಐ ಕಾರ್ಯಕರ್ತರ ನಡುವೆ ಘರ್ಷಣೆ

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಗಳ ನಡುವೆ ಶುಕ್ರವಾರ ಸಂಜೆ ಘರ್ಷಣೆ ಏರ್ಪಟ್ಟಿತ್ತು...

ಪುಣೆ: ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಗಳ ನಡುವೆ ಶುಕ್ರವಾರ ಸಂಜೆ ಘರ್ಷಣೆ ಏರ್ಪಟ್ಟಿತ್ತು. 
ದೆಹಲಿಯ ರಮ್ಜಾಸ್ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ಆಹ್ನಾನಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಎಫ್ಐ ಕಾರ್ಯಕರ್ತರು ಎಬಿವಿಪಿ ವಿರುದ್ಧ ಪೋಸ್ಟರ್ ಗಳನ್ನು ವಿವಿಯ ಆವರಣದಲ್ಲಿ ಅಂಟಿಸಿದ್ದಾರೆ. 
ಈ ಪೋಸ್ಟರ್ ಗಳಿಗೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು. ನಂತರ ಎರಡೂ ಸಂಘಟನೆಗಳ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟು, ಕೆಲ ಕಾಲ ವಿವಿಯ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು. 
ಎರಡೂ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಹೋಗಿ ಒಬ್ಬರ ಮೇಲೊಬ್ಬರು ದೂರನ್ನು ದಾಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
ಎಬಿವಿಪಿ ಮುರ್ದಾಬಾದ್ ಎಂದು ಎಸ್ಎಫ್ಐ ಕಾರ್ಯಕರ್ತರು ಪೋಸ್ಟರ್ ಗಳನ್ನು ಅಂಟಿಸಿದ್ದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಈ ವೇಳೆ ಮಾತನಾಡಲು ಹೋದಾಗ ನಮ್ಮ ಮೇಲೆ ಅವರ ದಾಳಿ ಮಾಡಿದರು. ನಾವು ಯಾರ ಮೇಲೂ ದಾಳಿಮಾಡಿರಲಿಲ್ಲ. ನಮ್ಮ ಮೇಲೆ ದಾಳಇ ನಡೆದಿದೆ ಎಂದು ಎಬಿವಿಪಿ ಕಾರ್ಯಕರ್ತ ಪ್ರದೀಪ್ ಗವಾಡೆಯವರು ಹೇಳಿದ್ದಾರೆ. 
ಎಸ್ಎಫ್ಐ ಕಾರ್ಯಕರ್ತ ಮಾವೋ ಛವನ್ ಮಾತನಾಡಿ, ಯೋಧರ ಕುರಿತಂತೆ ಸೋಲಾಪುರ್ ಎಂಎಲ್'ಸಿ ಪ್ರಶಾಂತ್ ಪರಿಛರಕ್ ಅವರು ಅವಹೇಳನಕಾರಿ ಮಾತುಗಳನ್ನಾಡಿದ್ದು ಹಾಗೂ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ವಿವಿ ಕ್ಯಾಂಪಸ್ ನಲ್ಲಿ ಎಸ್ಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಬಿವಿಪಿ ಕಾರ್ಯಕರ್ತರು ಇದ್ದಕ್ಕಿದ್ದಂತೆ ಸ್ಥಳಕ್ಕೆ ಬಂದು ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!