ದೇಶ

ಅಧಿಕಾರ ಕಳೆದುಕೊಂಡಿದ್ದಕ್ಕೆ ಫರೂಕ್ ಅಬ್ದುಲ್ಲಾ ತಮ್ಮ ದನಿಯನ್ನು ಬದಲಿಸುತ್ತಿದ್ದಾರೆ: ಕೇಂದ್ರ

Manjula VN
ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಕ್ ಅಬ್ದುಲ್ಲಾ ಅವರು ಅಧಿಕಾರ ಕಳೆದುಕೊಂಡಿದ್ದು, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಖಾತ್ರಿಯಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ ದನಿಯನ್ನು ಬದಲಿಸಿ ಮಾತನಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಫರೂಕ್ ಅಬ್ದುಲ್ಲಾ ಅವರ ಹೇಳಿಕೆ ಸರಿಯಲ್ಲ. ಅಧಿಕಾರ ಕಳೆದುಕೊಂಡು, ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ತಮ್ಮ ದನಿಯನ್ನು ಫರೂಕ್ ಬದಲಿಸುತ್ತಿದ್ದಾರೆ. ಮುಫ್ತಿ ಸಯೀದ್ ಅವರ ಪಿಡಿಪಿ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿರುವುದು ಅವರಿಗೆ ಅಸಮಾಧಾನವನ್ನು ತಂದಿದೆ ಎಂದು ಹೇಳಿದ್ದಾರೆ. 
ಅಟಲ್ ಬಿಹಾರಿ ವಾಜಪೇಯಿಯವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಿಜೆಪಿಯೊಂದಿಗೆ ನೀವೂ ಕೂಡ ಕೈಜೋಡಿಸಿದ್ದಿರಿ. ಇದೀಗ ಮುಫ್ತಿ ಅವರ ಮಗಳು ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾಗಿದ್ದರೆ ಇದಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ. ಫರೂಕ್ ಅಬ್ದುಲ್ಲಾ ಒಬ್ಬ ಅವಕಾಶವಾದಿ, ಎರಡು ನಾಲಿಗೆಯುಳ್ಳ ಮನುಷ್ಯ. ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ವಿರುದ್ದ ವಾಗ್ದಾಳಿ ನಡೆಸಿದ್ದ ಫರೂಕ್ ಅಬ್ದುಲ್ಲಾ ಅವರು, ಈ ಹಿಂದೆ ಪಿಡಿಪಿ ಕೋಮವಾದಿಗಳ ಪರವಾಗಿ ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿತ್ತು. ಆದರೆ, ಇದೀಗ ಕಾಶ್ಮೀರದಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಕೋಮವಾದಿಗಳೊಂದಿಗಿರುವುದರಿಂದ ಜನತೆ ಅಸಂತುಷ್ಟಗೊಂಡಿದ್ದಾರೆ. ಕಾಶ್ಮೀರದಲ್ಲಿರುವ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದು, ಶಾಸಕರಾಗುವ ಸಲುವಾಗಿ ಅಲ್ಲ, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಎಂದು ಹೇಳಿದ್ದರು. 
SCROLL FOR NEXT