ಅಗರ್ತಲಾ: ತ್ರಿಪುರ ಹಾಗೂ ಅರುಣಾಚಲ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರ ಬಿಂದು ಅರುಣಾಚಲ ಪ್ರದೇಶದ ಉತ್ತರ ಭಾಗದಲ್ಲಿರುವ ದಿಬಾಂಗ್ ಕಣಿವೆಯಲ್ಲಿ ಪತ್ತೆಯಾಗಿದೆ. ಮಧ್ಯಾಹ್ನ 12:32 ರ ವೇಳೆಗೆ ತ್ರಿಪುರಾದಲ್ಲಿ ಎರಡನೇ ಭೂಕಂಪನ ಸಂಭವಿಸಿದ್ದು, 4.0 ತೀವ್ರತೆ ದಾಖಲಾಗಿದೆ.
ಎರಡೂ ಭೂಕಂಪಗಳು ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ್ದು, ಮೊದಲು ಸಂಭವಿಸಿದ ಭೂಕಂಪ 10 ಕಿಮಿ ವರೆಗೂ ವ್ಯಾಪಿಸಿದ್ದರೆ ಎರಡನೆಯದ್ದು 33 ಕಿಮಿ ದೂರದ ವರೆಗೂ ವ್ಯಾಪಿಸಿದೆ ಎಂದು ತ್ರಿಪುರಾದ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.