ನವದೆಹಲಿ: 2017ನೇ ಸಾಲಿನ ಪವಿತ್ರ ಅಮರನಾಥ ಯಾತ್ರೆ ಇದೇ ಜೂನ್ 29ರಿಂದ ಆರಂಭವಾಗಲಿದ್ದು, ಮಾರ್ಚ್ 1ರಿಂದಲೇ ಯಾತ್ರೆಗಾಗಿ ನೋಂದಣಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಹೆಸರಾಂತ ಅಮರನಾಥ ಕ್ಷೇತ್ರದ ವಾರ್ಷಿಕ ತೀರ್ಥಯಾತ್ರೆಯ ನೋಂದಣಿ ಪ್ರಕ್ರಿಯೆಯನ್ನು ಅಮರನಾಥ ದೇವಸ್ಥಾನ ಮಂಡಳಿ (ಎಸ್ಎಎಸ್ ಬಿ) ಇದೇ ಮಾರ್ಚ್ 1ರಿಂದ ಆರಂಭಿಸಲಿದೆ. ಇನ್ನು ಅಮರನಾಥ ಯಾತ್ರಾ ಮಂಡಳಿಯ ವೆಬ್ ಸೈಟಿನಲ್ಲೂ ಯಾತ್ರಾರ್ಥಿಗಳು ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ಇನ್ನು ಯಾತ್ರೆ ಕೈಗೊಳ್ಳು ಯಾತ್ರಾರ್ಥಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಯಾತ್ರಿಗಳಿಗಾಗಿ ದೇಶದಾದ್ಯಂತ 150ಕ್ಕೂ ಅಧಿಕೃತ ವಿವಿಧ ಬ್ಯಾಂಕ್ ಗಳಲ್ಲಿ ನೋಂದಣಿಗೆ ಅನುವು ಮಾಡಿಕೊಡಲಾಗಿದೆ ಎಂದು ಅಮರನಾಥ ದೇವಸ್ಥಾನದ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತೀ ವರ್ಷದಂತೆ ಈ ಬಾರಿಯೂ ಬಾಲ್ ಟಾಲ್ ಮತ್ತು ಚಂದನವಾರಿ ಮಾರ್ಗಗಳ ಮೂಲಕ ಯಾತ್ರೆಗೆ ಅನುವು ಮಾಡಿಕೊಡಲಾಗತ್ತದೆ. ಇದೇ ಜೂನ್ 29 2017ರಂದು ಆರಂಭವಾಗುವ ಯಾತ್ರೆ ಆಗಸ್ಟ್ 7 2017ರಂದು ಕೊನೆಗೊಳ್ಳಲಿದೆ.