ದೇಶ

ಈ ವರ್ಷ ಯುಪಿಎಸ್ಇ ಮೂಲಕ 980 ಹುದ್ದೆಗಳ ಭರ್ತಿ

Sumana Upadhyaya
ನವದೆಹಲಿ: ನಾಗರಿಕ ಸೇವಾ ಪರೀಕ್ಷೆ 2017ರಡಿ 980 ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಹುದ್ದೆಗಳಿಗೆ ನೇಮಕಾತಿ ಮಾಡಲು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಅರ್ಜಿ ಆಹ್ವಾನಿಸಲಿದೆ. ಕಳೆದ 5 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಹುದ್ದೆ ಸಂಖ್ಯೆಯಾಗಿದೆ.
2016 ಮತ್ತು 2015ರಲ್ಲಿ ಕ್ರಮವಾಗಿ 1,079 ಮತ್ತು 1,164 ಹುದ್ದೆಗಳನ್ನು ನಾಗರಿಕ ಸೇವಾ ಪರೀಕ್ಷೆ ಮೂಲಕ ಭರ್ತಿ ಮಾಡಲಾಗಿತ್ತು. ಕಳೆದ ವರ್ಷದ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
2014 ಮತ್ತು 2013ರಲ್ಲಿ ಕ್ರಮವಾಗಿ ಒಟ್ಟು 1,364 ಮತ್ತು 1,228 ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಯುಪಿಎಸ್ಇ ಅಧಿಸೂಚನೆಯಲ್ಲಿ 2012ರಲ್ಲಿ ಒಟ್ಟು 1,091 ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. 2011ರಲ್ಲಿ 880 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಈ ವರ್ಷದ 980 ಹುದ್ದೆಗಳಲ್ಲಿ 27 ಹುದ್ದೆಗಳು ಶಾರೀರಿಕ ಅಂಗವೈಕಲ್ಯ ಹೊಂದಿರುವವರಿಗಾಗಿದೆ. 
ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಿ ಸೇವೆ(ಐಎಫ್ಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಹುದ್ದೆಗಳ ನೇಮಕಾತಿಗೆ ಪ್ರತಿವರ್ಷ ಯುಪಿಎಸ್ಇ ಪರೀಕ್ಷೆ ಮೂಲಕ ನೇಮಕಾತಿ ನಡೆಯುತ್ತಿದ್ದು ಪ್ರಾಥಮಿಕ, ಮುಖ್ಯ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.
ಈ ವರ್ಷ ನಾಗರಿಕ ಸೇವೆ ಪ್ರಾಥಮಿಕ ಪರೀಕ್ಷೆ ಆಗಸ್ಟ್ ಗೆ ಬದಲಾಗಿ ಜೂನ್ 18ರಂದು ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 17.
SCROLL FOR NEXT