ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಸಂಘಪರಿವಾರದೊಂದಿಗೆ ಸೇರಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಮನೀಷ್ ತಿವಾರಿ, ರಾಮಜಾಸ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ನಡೆಸಿರುವ ಹಲ್ಲೆ ಬಲಪಂಥೀಯ ಪಡೆಗಳ ಕೃತ್ಯವಾಗಿದ್ದು, ಕೇಂದ್ರ ಸರ್ಕಾರ ಬಂದಾಗಿನಿಂದ ಉಪನ್ಯಾಸಗಳನ್ನು ಅವರ ಮೂಗಿನ ನೇರಕ್ಕೆ ಸರಿ ಹೊಂದುವಂತೆ ಮಾಡುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟಲು ನಡೆಯುತ್ತಿರುವ ಯತ್ನದ ವಿರುದ್ಧ ಎಲ್ಲಾ ಪ್ರಗತಿಪರ ಪಡೆಗಳು ಒಗ್ಗಟ್ಟಿನ ಹೋರಾಟ ನಡೆಸಬೇಕೆಂದು ಮನೀಷ್ ತಿವಾರಿ ಕರೆ ನೀಡಿದ್ದಾರೆ.