ದೇಶ

ಕನ್ಸಾಸ್ ಶೂಟಿಂಗ್: ಹೈದರಾಬಾದ್ ನಲ್ಲಿ ಟೆಕ್ಕಿ ಶ್ರೀನಿವಾಸ್ ಅಂತ್ಯ ಸಂಸ್ಕಾರ

Manjula VN
ಹೈದರಾಬಾದ್: ಅಮೆರಿಕಾದ ಕನ್ಸಾಸ್ ನಗರದ ಬಾರೊಂದರಲ್ಲಿ ನಡೆದಿದ್ದ ಶೂಟೌಟ್'ನಲ್ಲಿ ಹತ್ಯೆಗೀಡಾಗಿದ್ದ ಭಾರತ ಮೂಲದ ಶ್ರೀನಿವಾಸ್ ಕುಚಿಬೋಟ್ಲಾ ಅವರ ಮೃತ ದೇಹವನ್ನು ಸೋಮವಾರ ರಾತ್ರಿ ಹೈದರಾಬಾದ್'ಗೆ ಕರೆ ತರಲಾಗಿದೆ. 
ಪಾರ್ಥೀವ ಶರೀರರವನ್ನು ಸ್ವೀಕಾರ ಮಾಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್ ಪೋಷಕರು ಮಗನ ಶವವನ್ನು ಕಂಡು ದುಃಖಿತರಾದರು. ಏರ್ ಇಂಡಿಯಾ ವಿಮಾನದ ಮೂಲಕ ತರಲಾದ ಪಾರ್ಥೀವ ಶರೀರದ ಜೊತೆಗೆ ಶ್ರೀನಿವಾಸ್ ಪತ್ನಿ ಸುನಯನಾ ದುಮಲಾ ಮತ್ತು ಸಹೋರದ ಅವರು ಕೂಡ ಆಗಮಿಸಿದ್ದರು. 
ಶ್ರೀನಿವಾಸ್ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಸಕಲ ಸರ್ಕಾರ ಗೌರವಗಳೊಂದಿಗೆ ಇಂದು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಜತೆಗೂಡಿ ಅಮೆರಿಕಾದ ಕನ್ಸಾಸ್ ನಗರದ ಬಾರ್ ವೊಂದಕ್ಕೆ ಶ್ರೀನಿವಾಸ್ ಅವರು ತೆರಳಿದ್ದರು. ಈ ವೇಳೆ ಅಮೆರಿಕಾದ ನೌಕಾಪಡೆಯ ನಿವೃತ್ತ ಯೋಧ ಅ್ಯಡಂ ಪ್ಯೂರಿಂಟನ್ ಎಂಬಾತ ಶ್ರೀನಿವಾಸ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಅಲ್ಲದೆ, ಅಮೆರಿಕ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗಾಡಿದ್ದ. 
SCROLL FOR NEXT