ಇಂಫಾಲ್: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಹಾಜಿ ಅಬ್ದುಲ್ ಸಲಾಮ್ ನಿಧನರಾಗಿದ್ದಾರೆ.
69 ವರ್ಷದ ಹಾಜಿ ಅಬ್ದುಲ್ ಅವರು ಕಳೆದ ರಾತ್ರಿ ಇಹಾಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಹಾಜಿ ಅಬ್ದುಲ್ ಸಲಾಮ್ ಮಣಿಪುರದಿಂದ ರಾಜ್ಯಸಭೆಗೆ ಆಯ್ಕೆಯಾದ ಮೊದಲ ಮುಸ್ಲಿಂ ಸದಸ್ಯರಾಗಿದ್ದಾರೆ. 2014ರಿಂದ ಹಾಜಿ ಅಬ್ದುಲ್ ಅವರು ಮೇಲ್ಮನೆಯಲ್ಲಿ ಪ್ರತಿನಿಧಿಸುತ್ತಿದ್ದರು.
ತೋಬಲ್ ಜಿಲ್ಲೆಯ ಹೈಬೊಂಗ್ ಮಕ್ಕಾಂಗ್ ನಲ್ಲಿ ಜನಿಸಿದ್ದ ಹಾಜಿ ಅಬ್ದುಲ್ ಸಲಾಮ್ ಅವರು ಪತ್ನಿ, ಮಗ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.