ತಂಬಿದೊರೈ 
ದೇಶ

ತಕ್ಷಣ ತಮಿಳುನಾಡು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಶಶಿಕಲಾಗೆ ತಂಬಿದೊರೈ ಆಗ್ರಹ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ...

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಎರಡೇ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು 'ಚಿನ್ನಮ್ಮ' ತಕ್ಷಣ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡು ಕಂದಾಯ ಸಚಿವ ಆರ್.ಬಿ .ಉದಯ್ ಕುಮಾರ್ ಅವರು ಶಶಿಕಲಾ ಮುಖ್ಯಮಂತ್ರಿಯಾಗಲಿ ಎಂದು ಮನವಿ ಮಾಡಿದ್ದರು. ಎಐಎಡಿಎಂಕೆಯ ಸಂಸದೀಯ ಪಕ್ಷದ ನಾಯಕ ಹಾಗೂ ಲೋಕಸಭೆ ಉಪ ಸಭಾಪತಿ ಎಂ.ತಂಬಿದೊರೈ ಅವರು ಇಂದು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ, ಶಶಿಕಲಾ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರು ತಂಬಿದೊರೈ ಅವರು, ಪಕ್ಷದ ನಾಯಕತ್ವ ಮತ್ತು ಸರ್ಕಾರದ ನಾಯಕತ್ವ ಬೇರೆ ಬೇರೆಯಾಗಿದ್ದರೆ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಏಕ ನಾಯಕತ್ವದಿಂದ ಮಾತ್ರ ಅಮ್ಮನ ಭರವಸೆಗಳನ್ನು ಈಡೇರಿಸಲು ಸಾಧ್ಯ. ಹೀಗಾಗಿ ಚಿನ್ನಮ್ಮ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಶಿಕಲಾ ಅವರಲ್ಲಿ ಜಯಲಲಿತಾ ಅವರಂತೆ ಬುದ್ಧಿವಂತಿಕೆ, ಸಾಮರ್ಥ್ಯ ಹಾಗೂ  ಜನ ಹಾಗೂ ಪಕ್ಷದ ಕಾರ್ಯಕರ್ತರನ್ನು ಪ್ರೀತಿಸುವ ಗುಣ ಇದೆ ಎಂದು ತಂಬಿದೊರೈ ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!