ದೇಶ

ಅಖಿಲೇಶ್ ಗೆ ಶೇ. 90 ರಷ್ಟು ಶಾಸಕರ ಬೆಂಬಲವಿದೆ: ಆಯೋಗಕ್ಕೆ ರಾಮ್ ಗೋಪಾಲ್

Shilpa D

ನವದೆಹಲಿ: ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷ ಒಡೆದು ಹೋಳಾದ ನಂತರ ಈಗ ಪಕ್ಷದ ಚಿಹ್ನೆಗಾಗಿ ಎರಡು ಬಣಗಳ ನಡುವೆ ಕಿತ್ತಾಟ ಆರಂಭವಾಗಿದೆ.

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪರ ಶೇ.90ರಷ್ಟು ಶಾಸಕರು ಬೆಂಬಲ ವ್ಯಕ್ತಪಡಿಸಿರುವುದರಿಂದ ನಮ್ಮದೇ ನಿಜವಾದ ಸಮಾಜವಾದಿ ಪಕ್ಷ ಎಂದು ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಚುನಾವಣಾ ಆಯೋಗಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ.

ರಾಜಧಾನಿಯಲ್ಲಿಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷದ ಸೈಕಲ್ ಚಿಹ್ನೆ ಕುರಿತು ಹಕ್ಕು ಪ್ರತಿಪಾದನೆ ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು,  ಅಖಿಲೇಶ್ ಯಾದವ್ ಪರ ಶೇ.90ರಷ್ಟು ಶಾಸಕರ ಬೆಂಬಲವಿದೆ. ಹೀಗಾಗಿ ನಮ್ಮದೇ ನಿಜವಾದ ಸಮಾಜವಾದಿ ಪಕ್ಷ ಹಾಗೂ ಈ ಚಿಹ್ನೆಯನ್ನು ತಮ್ಮ ಬಣಕ್ಕೇ ನಿಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿ ಹೇಳಿದರು. .

ತಮ್ಮನ್ನು ಉಚ್ಚಾಟಿಸಿ ಮುಲಾಯಂ ಸಿಂಗ್ ಅವರು ಹೊರಡಿಸಿರುವ ಆದೇಶ ಪತ್ರದ ಸಹಿ ಬಹುಶಃ ನಕಲು ಎಂದು ರಾಜ್ಯಸಭಾ ಸದಸ್ಯ ಕಿರಣ್‍ಮಯಿ ನಂದಾ  ಸಂಶಯ ವ್ಯಕ್ತ ಪಡಿಸಿದ್ದಾರೆ.

ಸಿಎಂ ಅಖಿಲೇಶ್ ಹಾಗೂ ಅವರ ಬೆಂಬಲಿಗರನ್ನು ಉಚ್ಚಾಟಿಸಿದ್ದು, ಯಾವುದೇ ಕಾರಣಕ್ಕೂ ಉಚ್ಛಾಟನೆಯನ್ನು ಹಿಂತೆಗೆಯುವುದಿಲ್ಲ ಎಂದು  ಮುಲಾಯಂ ಸಿಂಗ್ ಯಾದವ್ ಬೆಂಬಲಿಗರು ಘೋಷಿಸಿದ್ದಾರೆ.

SCROLL FOR NEXT