ಪುದುಚೇರಿ: ಪುದುಚೇರಿ ಮಾಜಿ ಸಚಿವ ಹಾಗೂ ಪದುಚೇರಿ ವಿಧಾಸಭೆ ಮಾಜಿ ಸ್ಪೀಕರ್ ವಿಎಂಸಿ ಶಿವಕುಮಾರ್ ಅವರನ್ನು ಮಂಗಳವಾರ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಇಂದು ಕರೈಕಲ್ ನ ನಿರಾವಿಯಲ್ಲಿ ತಮ್ಮ ನಿರ್ಮಾಣ ಹಂತದ ಮ್ಯಾರೇಜ್ ಹಾಲ್ ಪರಿಶೀಲಿಸಲು ತೆರಳಿದ್ದ ವೇಳೆ ದುಷ್ಕರ್ಮಿಗಳು ತಂಡ 65 ವರ್ಷದ ಶಿವಕುಮಾರ್ ಮೇಲೆ ಬಾಂಬ್ ಎಸೆದು ಹತ್ಯೆ ಮಾಡಿದ್ದಾರೆ.
ಗಣಪತಿ ಪಿಳ್ಳೈ ಮತ್ತು ಪುಷ್ಪವಳ್ಳಿ ಅಮ್ಮಾಳ್ ದಂಪತಿಯ ಮಗನಾದ ಶಿವಕುಮಾರ್ ಅವರು 1969ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು.
ಶಿವಕುಮಾರ್ ಅವರು ಶಾಸಕರಾಗಿ, ಸಚಿವರಾಗಿ ಹಾಗೂ 1996ರಿಂದ 2001ರ ವರೆಗೆ ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics