ದೇಶ

ನಗದು ರಹಿತ ವಹಿವಾಟು: ಏಮ್ಸ್ ನೊಂದಿಗೆ ಮೊಬಿವಿಕ್ ಒಪ್ಪಂದ

Srinivas Rao BV
ನವದೆಹಲಿ: ನಗದು ರಹೈತ ವಹಿವಾಟು/ ಪಾವತಿ ನಡೆಸಲು ನೆರವಾಗುವ ನಿಟ್ಟಿನಲ್ಲಿ  ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಹತ್ವದ ಹೆಜ್ಜೆ ಇಟ್ಟಿದ್ದು ಆನ್ ಲೈನ್ ಪೇಮೆಂಟ್ ಪೋರ್ಟಲ್ ಸಂಸ್ಥೆ ಮೊಬಿವಿಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 
ಮೊಬಿವಿಕ್ ನೊಂದಿಗೆ ಏಮ್ಸ್ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದಾಗಿದೆ. ವೈದ್ಯರಿಗೆ ನೀಡಬೇಕಿರುವ ಶುಲ್ಕ, ತಪಾಸಣೆ ಹಾಗೂ ಇತರ ಸೇವೆಗಳಿಗೆ ನೀಡಬೇಕಿರುವ ಶುಲ್ಕವನ್ನು ಜನವರಿ ತಿಂಗಳ ಮೊದಲ ವಾರದಿಂದಲೇ ನಗದು ರಹಿತ ಪಾವತಿ ಮಾಡಬಹುದಾಗಿದೆ ಎಂದು ಮೊಬಿವಿಕ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 
ಮೊಬೈಲ್ ಆಪ್ ನ್ನೂ ಬಿಡುಗಡೆ ಮಾಡಿರುವ ಮೊಬಿವಿಕ್, ಇತ್ತೀಚೆಗಷ್ಟೇ ಅಮುಲ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಆನ್ ಲೈನ್ ವಹಿವಾಟು/ ಪಾವತಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿತ್ತು. 
SCROLL FOR NEXT