ನವದೆಹಲಿ: ಬುಧವಾರ ಚೆನ್ನೈನಲ್ಲಿ ನಡೆದ ಡಿಎಂಕೆ ಸಾಮಾನ್ಯ ಸಭೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿಗೆ ಸಂತಾಪ ಸೂಚಿಸಲಾಯಿತು.
ತಮಿಳುನಾಡಿನ ಮೀನುಗಾರರನ್ನು ಮತ್ತು ದೋಣಿಗಳನ್ನು ವಶಪಡಿಸಿಕೊಂಡ ಶ್ರೀಲಂಕಾ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಸಭೆಯಲ್ಲಿ ನಾಯಕರು ಒತ್ತಾಯಿಸಿದ್ದಾರೆ.
ಇಂದಿನ ಸಾಮಾನ್ಯ ಸಭೆಯಲ್ಲಿ ನೋಟುಗಳ ಚಲಾವಣೆ ರದ್ದು ಸೇರಿದಂತೆ 16 ನಿಲುವಳಿಗಳನ್ನು ಮಂಡಿಸಿ ಅನುಮೋದಿಸಲಾಯಿತು.