ದೇಶ

ಸುದೀಪ್ ಬಂಧನ ಖಂಡಿಸಿ ಪ್ರಧಾನಿ ನಿವಾಸ ಮುತ್ತಿಗೆಗೆ ಯತ್ನಿಸಿದ ಟಿಎಂಸಿ ಸಂಸದರ ವಶಕ್ಕೆ

Lingaraj Badiger
ನವದೆಹಲಿ: ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಧ್ಯಾಯ ಅವರ ಬಂಧನ ಖಂಡಿಸಿ ಬುಧವಾರ ಟಿಎಂಸಿ ಸಂಸದರು ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನಾ ಮೆರವಣಿ ಮೂಲಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳುತ್ತಿದ್ದ ಪಶ್ಚಿಮ ಬಂಗಾಳದ ಆಡಳಿತರೂಢ ಪಕ್ಷದ ಸಂಸದರನ್ನು ಪೊಲೀಸರು ಮಧ್ಯದಲ್ಲಿಯೇ ತಡೆದು, ವಶಕ್ಕೆ ಪಡೆದರು. 
ಈ ವೇಳೆ ಮಾತನಾಡಿದ ಟಿಎಂಸಿ ನಾಯಕ ಸೌಗತ ರಾಯ್ ಅವರು, ನಾವು ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೇವೆ. ಆದರೂ ನಮ್ಮನ್ನು ಮಧ್ಯದಲ್ಲಿಯೇ ತಡೆದ ಪೊಲೀಸರು, ಕೆಲವು ಸಂಸದರನ್ನು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಟಿಎಂಸಿಯ 36 ಸಂಸದರು ಭಾಗವಹಿಸಿದ್ದರು ಎಂದಿರುವ ರಾಯ್, ಮೋದಿ ಸರ್ಕಾರದ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತೃಣಮೂಲ ಕಾಂಗ್ರೆಸ್ ನ ಮತ್ತೊಬ್ಬ ಸಂಸದ ಸುದೀಪ್ ಬಂಡೋಪಧ್ಯಾಯ ಅವರನ್ನು ಮಂಗಳವಾರ ಬಂಧಿಸಿದೆ. ಇದೆ ಪ್ರಕರಣ ಸಂಬಂಧ ಸಿಬಿಐ ಡಿಸೆಂಬರ್ 3ರಂದು ಟಿಎಂಸಿ ಸಂಸದ ತಪಸ್ ಪಾಲ್ ಅವರನ್ನು ಬಂಧಿಸಿತ್ತು.
SCROLL FOR NEXT