ನವದೆಹಲಿ: ಗುರು ಗೋವಿಂದ ಸಿಂಗ್ ಅವರ ಪ್ರಕಾಶ್ ಪರ್ವ ಆಚರಣೆ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, 10ನೇ ಸಿಖ್ ಗುರು ಗೋವಿಂದ್ ಸಿಂಗ್ ಅವರ ಶೌರ್ಯ, ಸಾಹಸ ಕಥೆಗಳು ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ಹಾಸುಹೊಕ್ಕಿದೆ ಎಂದು ಹೇಳಿದರು.
ಟ್ವಿಟ್ಟರ್ ನಲ್ಲಿ ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಗುರು ಗೋವಿಂದ್ ಸಿಂಗ್ ಅವರ ಇಡೀ ಜೀವನ ಜನರ ಸೇವೆ ಮತ್ತು ಸತ್ಯ, ನ್ಯಾಯ ಮತ್ತು ನಿಷ್ಠೆಯ ಪರ ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಅವರ ಧ್ಯೈರ್ಯ, ಅಸಾಧಾರಣ ಜ್ಞಾನ ಪ್ರತಿ ಭಾರತೀಯನಿಗೆ ಸ್ಪೂರ್ತಿ ಎಂದರು.
ಇಂದು ಪಾಟ್ನಾದಲ್ಲಿ ನಡೆಯುವ 350ನೇ ಪ್ರಕಾಶ್ ಪರ್ವ ಆಚರಣೆಯ ಭಾಗಿಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ಪರ್ವ ದೇಶಾದ್ಯಂತ ಆಚರಿಸಲ್ಪಡುತ್ತಿದ್ದರೂ ಮುಖ್ಯ ಕಾರ್ಯಕ್ರಮ ನಡೆಯುವುದು ಪಾಟ್ನಾದ ತಕ್ತ್ ಹರ್ಮಂದರ್ ಸಾಹಿಬ್ ನಲ್ಲಿ. ಅಲ್ಲಿಯೇ ಗುರು ಗೋವಿಂದ್ ಸಿಂಗ್ ಜನಿಸಿದ್ದರು. ಲಕ್ಷಾಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.