ಗಾಂಧಿ ಇಲ್ಲದ ನೋಟ್ 
ದೇಶ

ಮಧ್ಯಪ್ರದೇಶ ರೈತನಿಗೆ ಗಾಂಧಿ ಚಿತ್ರ ಇಲ್ಲದ 2000 ರು. ನೋಟ್ ನೀಡಿದ ಬ್ಯಾಂಕ್!

ಸಾರ್ವಜನಿಕ ವಲಯದ ಬ್ಯಾಂಕ್‌ ವೊಂದು ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ರೈತನಿಗೆ ಮಹಾತ್ಮ ಗಾಂಧಿ...

ಭೋಪಾಲ್‌: ಸಾರ್ವಜನಿಕ ವಲಯದ ಬ್ಯಾಂಕ್‌ ವೊಂದು ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ರೈತನಿಗೆ ಮಹಾತ್ಮ ಗಾಂಧಿ ಚಿತ್ರವಿಲ್ಲದ ಹೊಸ 2000 ರುಪಾಯಿ ನೋಟ್ ನೀಡಿದ್ದು, ಹಣ ಪಡೆದ ರೈತ ದಿಗ್ಭ್ರಮೆಗೊಂಡಿದ್ದಾನೆ.
ರೈತ ಲಕ್ಷ್ಮಣ್‌ ಮೀನಾ ಎಂಬುವವರು ಶಿಯೋಪುರ ಜಿಲ್ಲೆಯ ಬರೋಡಾದಲ್ಲಿನ ಬ್ಯಾಂಕ್‌ ಖಾತೆಯಿಂದ ಹಣ ಪಡೆದಿದ್ದು, 2 ಸಾವಿರ ರುಪಾಯಿ ಮುಖಬೆಲೆಯ ಮೂರು ನೋಟುಗಳನ್ನು ಬ್ಯಾಂಕ್‌ ಸಿಬ್ಬಂದಿ ನೀಡಿದ್ದಾರೆ.
ಮಂಗಳವಾರ ಬ್ಯಾಂಕ್‌ನಿಂದ ಹಣ ಪಡೆದಿದಿರುವ ರೈತ ತಡವಾಗಿ ನೋಟುಗಳನ್ನು ಗಮನಿಸಿದ್ದು, ನೋಟಿನಲ್ಲಿ ಗಾಂಧೀಜಿ ಚಿತ್ರವೇ ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಮಾರುಕಟ್ಟೆಯಿಂದ ಬ್ಯಾಂಕ್‌ಗೆ ಮರಳಿ ಈ ಕುರಿತು ಮ್ಯಾನೇಜರ್‌ ಗಮನಕ್ಕೆ ತಂದಿದ್ದಾರೆ.
ಪರಿಶೀಲಿಸಿರುವ ಅಧಿಕಾರಿಗಳು ನೋಟು ಅಸಲಿ ಎಂದು ದೃಢಪಡಿಸಿದ್ದಾರೆ. ಮುದ್ರಣ ದೋಷದಿಂದ ಈ ರೀತಿ ಆಗಿರಬಹುದೆಂದು ಅಭಿಪ್ರಾಯ ಪಟ್ಟಿರುವ ಬ್ಯಾಂಕ್‌ ಸಿಬ್ಬಂದಿ ಆ ನೋಟುಗಳನ್ನು ಖಾತೆಗೆ ಜಮೆ ಮಾಡುವಂತೆ ರೈತನಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್