ದೇಶ

ರೈಲು ಟಿಕೆಟ್ ಗಳ ತ್ವರಿತ ಬುಕಿಂಗ್ ಗೆ ಐಆರ್ ಸಿಟಿಸಿಯಿಂದ ಹೊಸ ಆಪ್

Sumana Upadhyaya
ನವದೆಹಲಿ: ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ)ವೆಬ್ ಸೈಟ್ ನಲ್ಲಿ ಇನ್ನು ಮುಂದೆ ಟಿಕೆಟ್ ನ್ನು ಇನ್ನಷ್ಟು ವೇಗವಾಗಿ ಕಾಯ್ದಿರಿಸಬಹುದು.
ಸದ್ಯದಲ್ಲಿಯೇ ಐಆರ್ ಸಿಟಿಸಿ ಕನೆಕ್ಟ್ ವೆಬ್ ಸೈಟ್ ಐಆರ್ ಸಿಟಿಸಿ ರೈಲ್ ಕನೆಕ್ಟ್ ಎಂದು ಹೊಸ ಹೆಸರಿನಿಂದ ಮತ್ತೆ ಆರಂಭವಾಗಲಿದ್ದು ಆಪ್ ನ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಸುಧಾರಿಸಲು ಹೆಚ್ಚಿನ ವಿಶೇಷತೆಗಳನ್ನು ನೀಡಲಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ, ಐಆರ್ ಸಿಟಿಸಿ ಮುಂದಿನ ವಾರ ಆಪ್ ನ್ನು ಬಿಡುಗಡೆ ಮಾಡಲಿದೆ. ಮುಂದಿನ ಪೀಳಿಗೆಯ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಹೊಸ ಟಿಕೆಟ್ ಆಪ್ ಒಳಗೊಳ್ಳಲಿದೆ. ಇದನ್ನು ಟಿಕೆಟಿಂಗ್ ವೆಬ್ ಸೈಟ್ ಜೊತೆಗೆ ಸಿಂಕ್ರೊನೈಸ್ ಮಾಡಲಾಗುತ್ತದೆ. ಇದು ಈಗಿರುವ ವ್ಯವಸ್ಥೆಯಲ್ಲಿ ಇಲ್ಲ.
ಹೊಸ ಐಆರ್ ಸಿಟಿಸಿ ರೈಲ್ ಕನೆಕ್ಟ್ ನಲ್ಲಿ ಇರುವ ವಿಶೇಷತೆಗಳು ಇಂತಿವೆ: ಇತ್ತೀಚೆಗೆ ಕಾಯ್ದಿರಿಸಿದ ಟಿಕೆಟ್ ಆಧಾರದ ಮೇಲೆ ಪ್ರಯಾಣಿಕರ ವಿವರ ಉಳಿಸುವಿಕೆ, ಹುಡುಕಿ ರೈಲು ಟಿಕೆಟ್ ಕಾಯ್ದಿರಿಸುವುದು, ಟಿಕೆಟ್ ಗಳ ಮೀಸಲು ಸ್ಥಿತಿ ಅಥವಾ ರದ್ದತಿಯನ್ನು ಪರೀಕ್ಷಿಸುವುದು, ಮುಂದಿನ ಪ್ರಯಾಣದ ಎಚ್ಚರಿಕೆ ನೀಡುವುದು ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿರುತ್ತವೆ.
SCROLL FOR NEXT