ಕಳೆದ ವರ್ಷ ತಿರುಪತಿಗೆ ಬಂದ ಕಾಣಿಕೆ ಬರೋಬ್ಬರಿ 1018 ಕೋಟಿ ರುಪಾಯಿ!
ಜಗತ್ತಿನ ಶ್ರೀಮಂತರ ದೇವರು ತಿರುಪತಿ ವೆಂಕಟೇಶ್ವರನ ಹುಂಡಿಗೆ 2016ರಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನ ರೂಪದ ಕಾಣಿಕೆ, ದೇಣಿಗೆ ಹರಿದುಬಂದಿದೆ...
ತಿರುಪತಿ: ಜಗತ್ತಿನ ಶ್ರೀಮಂತರ ದೇವರು ತಿರುಪತಿ ವೆಂಕಟೇಶ್ವರನ ಹುಂಡಿಗೆ 2016ರಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಚಿನ್ನ ರೂಪದ ಕಾಣಿಕೆ, ದೇಣಿಗೆ ಹರಿದುಬಂದಿದೆ.
2016ರಲ್ಲಿ ಸುಮಾರು 2.6 ಕೋಟಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇನ್ನು ತಿರುಪತಿ ಹುಂಡಿಗೆ ಕಳೆದ ವರ್ಷ ಸುಮಾರು 1018 ಕೋಟಿ ರುಪಾಯಿ ನಗದು ರೂಪದ ಕಾಣಿಕೆ ಹರಿದು ಬಂದಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ತಿಳಿಸಿದೆ.
67.12 ಲಕ್ಷ ಭಕ್ತರು ತಲಾ 300 ರುಪಾಯಿ ನೀಡಿ ಆನ್ ಲೈನ್ ಮೂಲಕ ದರ್ಶನದ ಟಿಕೆಟ್ ಖರೀದಿಸಿದ್ದಾರೆ. ಈ ಮೂಲಕ 201 ಕೋಟಿ ರುಪಾಯಿ ಹೆಚ್ಚುವರಿ ಆದಾಯ ದೊರೆತಿದೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಡಿ ಸಾಂಬಶಿವರಾವ್ ತಿಳಿಸಿದ್ದಾರೆ.
ಕಳೆದ ವರ್ಷ ಸುಮಾರು 10 ಕೋಟಿ ಲಾಡು ಪ್ರಸಾದ ತಯಾರಿಸಿದ್ದು 10 ಕೋಟಿ ಲಾಡು ತಯಾರಿಸಿದ್ದು ದಾಖಲೆ ಎಂದು ಅವರು ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.