ದೇಶ

ಸಲ್ಮಾನ್ ಖಾನ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಜನವರಿ 18ಕ್ಕೆ ತೀರ್ಪು

Lingaraj Badiger
ಜೋಧಪುರ್: ಜೋಧಪುರ್ ಜಿಲ್ಲಾ ಕೋರ್ಟ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ವಿರುದ್ಧದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ತೀರ್ಪು ಜನವರಿ 18ಕ್ಕೆ ಪ್ರಕಟಿಸುವುದಾಗಿ ಸೋಮವಾರ ಹೇಳಿದೆ. ಅಲ್ಲದೆ ಅಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಬಾಲಿವುಡ್ ನಟನಿಗೆ ಸೂಚಿಸಿದೆ.
ಪರವಾನಗಿ ಅವಧಿ ಮುಗಿದ ನಂತರವೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ಹಾಗೂ ಅದನ್ನು ಬಳಸಿದ ಆರೋಪ ಎದುರಿಸುತ್ತಿರುವ ಸಲ್ಮಾನ್ ಖಾನ್ ಅವರ ವಿರುದ್ಧದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಕ್ಕೆ ಸಂಬಂಧವಿಸಿದಂತೆ ವಾದ, ಪ್ರತಿವಾದ ಇಂದು ಅಂತ್ಯಗೊಂಡಿದ್ದು, ಜನವರಿ 18ಕ್ಕೆ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
1998ರಲ್ಲಿ ಹಮ್  ಸಾಥ್ ಸಾಥ್  ಹೈ ಸಿನಿಮಾ ಶೂಟಿಂಗ್​ ವೇಳೆ  ಜೋಧ್‍ಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್​ ಕೃಷ್ಣಮೃಗ ಬೇಟೆಯಾಡಿದ್ದರು. ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್​ ಖಾನ್​ ವಿರುದ್ಧ ಅರಣ್ಯ ಇಲಾಖೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಸಿದಂತೆ ಸಲ್ಮಾನ್ ಖಾನ್ 2006 ರ ಏಪ್ರಿಲ್ ಮತ್ತು 2007ರ ಆಗಸ್ಟ್​​ನಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದ್ದಾರೆ.
SCROLL FOR NEXT