ಕೋಲ್ಕತಾ ಮಸೀದಿ ಇಮಾಮ್- ಲೇಖಕ ತರೇಖ್ ಫತಾಹ್
ನವದೆಹಲಿ: ಪಾಕಿಸ್ತಾನಿ ಸಂಜಾತ ಕೆನಡಾದ ಬರಹಗಾರ ತರೇಖ್ ಫತಾಹ್ ಅವರ ಕತ್ತು ಸೀಳುವುದಾಗಿ ಕೊಲ್ಕತ್ತಾದ ಟಿಪ್ಪು ಸುಲ್ತಾನ್ ಮಸೀದಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ರೆಹಮಾನ್ ಬರ್ಕತಿ ಬೆದರಿಕೆ ಹಾಕಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫತ್ವಾ ಹೊರಡಿಸಿದ್ದ ಬರ್ಕತಿ, ಈಗ ಲೇಖಕ ತರೇಖ್ ಫತಾಹ್ ವಿರುದ್ಧ ವಾಗ್ದಾಳಿ ನಡೆಸಿದ್ದು ನಿಮ್ಮ ಕತ್ತನ್ನು ಸೀಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಟಿವಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮೋದಿ ಅವರ ವಿರುದ್ಧ ಬರ್ಕತಿ ಫತ್ವಾ ಹೊರಡಿಸಿದ್ದನ್ನು ಲೇಖಕ ತರೇಖ್ ಫತಾಹ್ ವಿರೋಧಿಸಿ ಟೀಕಿಸಿ, ಫತ್ವಾ ಬಗ್ಗೆ ಉಲ್ಲೇಖಿಸುತ್ತಾ, ಭಾರತ ಮಧ್ಯಯುಗದ ಪದ್ಧತಿಗಳಿಂದ ಬಹಳ ದೂರ ಸಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತರೇಖ್ ಫತಾಹ್ ಕುರಿತು ಇಮಾಮ್ ವಿವಾದಿತ ಹೇಳಿಕೆ ನೀಡಿದ್ದಾರೆ.
ತಾನು ಹೊರಡಿಸಿರುವ ಫತ್ವಾವನ್ನು ಯಾರು ಕಾರ್ಯಗತಗೊಳಿಸುತ್ತಾರೋ ಅವರಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಸೀದಿಯ ಇಮಾಮ್ ಹೇಳಿದ್ದಾರೆ.