ದೇಶ

ಫೆ.6ರೊಳಗೆ 6 ಸಾವಿರ ಕೋಟಿ ಪಾವತಿಸಿ ಇಲ್ಲವೆ ಜೈಲು ಸೇರಿ: ಸಹರಾ ಮುಖ್ಯಸ್ಥನಿಗೆ ಸುಪ್ರೀಂ ಸೂಚನೆ

Lingaraj Badiger
ನವದೆಹಲಿ: ಸಹಾರಾ ಸಮೂಹ ಕಂಪನಿಗಳ ಮುಖ್ಯಸ್ಥ ಸುಬ್ರತಾ ರಾಯ್‌ ಅವರಿಗೆ ಕೊನೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಫೆಬ್ರವರಿ 6ರೊಳಗೆ 6 ಸಾವಿರ ಕೋಟಿ ಪಾವತಿಸಿ ಇಲ್ಲವೆ ಜೈಲಿಗೆ ಮರಳಿ ಎಂದು ಗುರುವಾರ ಆದೇಶಿಸಿದೆ.
ನೋಟ್ ನಿಷೇಧ ಹಾಗೂ ಆರ್ಥಿಕ ಕುಸಿತದಿಂದಾಗಿ ಹಣ ಪಾವತಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸುಬ್ರತಾ ರಾಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಒಂದು ವೇಳೆ ಸಹರಾ ಮುಖ್ಯಸ್ಥರು ಫೆ.6ರೊಳೆಗೆ 6 ಸಾವಿರ ಕೋಟಿ ಪಾವತಿಸದಿದ್ದರೆ ಅವರೇ ಜೈಲು ಸೇರುತ್ತಾರೆ ಎಂದು ಹೇಳಿದೆ.
ಬೇರೆ ಪ್ರಕರಣಗಳಿಗಿಂತ ಈ ಪ್ರಕರಣದಲ್ಲಿ ಸುಬ್ರತಾ ರಾಯ್ ಅವರಿಗೆ ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಒಂದು ನಿಗಧಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ನಿಮ್ಮ ಆಸ್ತಿಯನ್ನು ಹರಾಜು ಹಾಕಬೇಕಾಗುತ್ತದೆ ಎಂದು ಸಹ ಕೋರ್ಟ್ ಎಚ್ಚರಿಸಿದೆ.
ಇದೇ ವೇಳೆ ಲಂಡನ್ ಬ್ಯಾಂಕ್ ನಲ್ಲಿರುವ 35 ಮಿಲಿಯನ್ ಪೌಂಡ್ ನ್ನು ಸೆಬಿಗೆ ವರ್ಗಾವಣೆ ಮಾಡಲು ಸಹರಾಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
SCROLL FOR NEXT