ದೇಶ

ಮಣಿಪುರದಲ್ಲಿ ಕಾರಿನ ಮೇಲೆ ಶಂಕಿತ ಉಗ್ರರ ದಾಳಿ: 1 ಸಾವು, 3 ಗಾಯ

Vishwanath S
ಇಂಫಾಲ್: ಮಣಿಪುರದಲ್ಲಿ ಕಾರಿನ ಮೇಲೆ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 
ನೋನಿ ಜಿಲ್ಲೆಯ ಲುಕ್ಮಾಬಿ ಬಳಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಉಗ್ರರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
35 ವರ್ಷದ ದಿಖುನ್ನಾಗ್ ಗುನ್ಮೈ ಮೃತ ವ್ಯಕ್ತಿಯಾಗಿದ್ದು, ಖಾಸಗಿ ಶಿಕ್ಷಕಿ 31 ವರ್ಷದ ಥನಿಲುಂಗ್ ಕಮೈ ಗಂಭೀರ ಗಾಯದಿಂದ ಬಳಲುತ್ತಿದ್ದಾರೆ. ಇನ್ನು 30 ವರ್ಷದ ನಿಪೇನ್ ಕಲಿಟ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಯುನೈಟೆಡ್ ನಾಗಾ ಕೌನ್ಸಿಲ್(ಯುಎನ್ಯು) ಆರ್ಥಿಕ ದಿಗ್ಬಂದನ ಏರಿದ್ದು ಹೀಗಾಗಿ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾಗ ಶಂತಿಕ ಉಗ್ರರು ದಾಳಿ ನಡೆಸಿದ್ದಾರೆ. 
SCROLL FOR NEXT