ದೇಶ

ಜಮ್ಮು-ಕಾಶ್ಮೀರ: ಉಗ್ರರ ಅಡಗುತಾಣಗಳ ಮೇಲೆ ಸೇನೆ ದಾಳಿ, ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳು ವಶಕ್ಕೆ

Manjula VN

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಶನಿವಾರ ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ, ಸುರಾನ್ಕೋಟ್, ಮಂಧಾನ್, ಮಂಡಿ ಮತ್ತು ಠಾಣಾ ಮಂಡಿ ಸೇರಿದಂತೆ ಇನ್ನಿತರೆ ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, 4-5 ದಿನಗಳ ಕಾಲ ನಡೆಸಿದ ಈ ಕಾರ್ಯಾಚರಣೆಯಲ್ಲಿ ಪೂಂಚ್ ಜಿಲ್ಲೆಯ ಸುರಾನ್ಕೋಟ್ ನ ಛಾರ್ಮಾರ್ ಪ್ರದೇಶದಲ್ಲಿ ಉಗ್ರರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

2 ಎಕೆ 56 ರೈಫಲ್, 2 ಆರ್'ಪಿಜಿಗಳು, 2 9 ಎಂಎಂ ಪಿಸ್ತೂಲ್ ಗಳು, 302 ಸುತ್ತಿನ ಗುಂಡುಗಳು, 10 ನಿಯತಕಾಲಿಕೆಗಳು, ಚೀನಾ ಮೂಲದ ಗ್ರೆನೇಡ್ ಗಳು, 9 ಎಂಎಂ ಪಿಸ್ತೂಲಿನೊಂದಿಗೆ ಮೂರು ಸುತ್ತಿನ ಗುಂಡುಗಳು, 88 ಸುತ್ತಿನ ಮಷಿನ್ ಗನ್ ಗಳು, 12 ಸುತ್ತಿನ ಸ್ನಿಪರ್ ರೈಫಲ್, ಆ್ಯಂಟಿ ಟ್ಯಾಂಕ್ ರೈಫಲ್ ಗ್ರೆನೇಡ್ ಮತ್ತು ಮಾರ್ಟರ್ ಶೆಲ್ ಗಳನ್ನು ಸೇನೆ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.

ಸೇನೆ ಈ ಕಾರ್ಯಾಚರಣೆ ಉಗ್ರರಿಗೆ ಭಾರೀ ಹೊಡೆತವನ್ನು ನೀಡಿದ್ದು, ಪ್ರಸ್ತುತ ಸ್ಥಳದಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT