ಶಬರಿಮಲೆ: ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದ ಮಕರ ಜ್ಯೋತಿ ಶನಿವಾರ ಸಂಜೆ 6 ಗಂಟೆ 40 ನಿಮಿಷಕ್ಕೆ ಕಾಣಿಸಿಕೊಂಡಿದೆ. ಪೊನ್ನಂಬಲಮೇಡುವಿಲ್ಲಿ ಕಾಣಿಸಿಕೊಂಡ ತಕ್ಷಣ ಲಕ್ಷಾಂತರ ಭಕ್ತರು ಒಕ್ಕೊರಲಿನಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಕ್ತಿಯಿಂದ ಕೂಗಿದರು.ಮಕರಜ್ಯೋತಿಯನ್ನು ಅಪಾರ ಜನಸಾಗರ ಕಣ್ತುಂಬಿಕೊಂಡಿತು.
ದೇವಸ್ಥಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಸಾವಿರಕ್ಕಿಂತಲೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾ ಮದಲ್ಲಿರುವ ಶಬರಿಮಲೆ ಬೆಟ್ಟದಲ್ಲಿ ಇಂದು 3 ಬಾರಿ ಜ್ಯೋತಿ ಕಾಣಿಸಿಕೊಂಡಿತು. ಅಲ್ಲಿ ಸೇರಿಕೊಂಡಿದ್ದ ಭಕ್ತ ಸಾಗರ ಜ್ಯೋತಿಯನ್ನು ವೀಕ್ಷಿಸಿ ಪುನೀತರಾದರು.