ಅಲಹಾಬಾದಿನಲ್ಲಿ ಪೋಸ್ಟರ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಡಿಂಪಲ್ ಯಾದವ್
ಅಲಹಾಬಾದ್: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿಯವರ ಭಾವಚಿತ್ರವಿರುವ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮೈತ್ರಿಯ ಸಾಧ್ಯತೆ ಬಗ್ಗೆ ಇರುವ ಅನುಮಾನಗಳಿಗೆ ಪುಷ್ಟೀಕರಣ ನೀಡಿದೆ.
ಅಲಹಬಾದ್ ನಗರದ ಸುತ್ತಮುತ್ತ ಪೋಸ್ಟರ್ ಕಂಡುಬರುತ್ತಿದೆ. ಮೂಲಗಳ ಪ್ರಕಾರ ಪೋಸ್ಟರ್ ಗಳನ್ನು ಸ್ಥಳೀಯ ಮುಖಂಡರು ಇರಿಸಿದ್ದು ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಬೆಂಬಲ ನೀಡುವುದಕ್ಕಾಗಿದೆ.
ಮುಂಬರುವ ಚುನಾವಣೆಯ ಪ್ರಚಾರಕ್ಕೆ ಈ ಇಬ್ಬರೂ ನಾಯಕಿಯರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರಿಬ್ಬರೂ ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗಳಲ್ಲಿಯೂ ಪ್ರಚಾರ ನಡೆಸಬೇಕೆಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಈ ಪೋಸ್ಟರ್ ಗಳ ಬಗ್ಗೆ ಕಾಂಗ್ರೆಸ್ ಇದುವರೆಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಆದರೆ ಸಮಾಜವಾದಿ ಮತ್ತು ಕಾಂಗ್ರೆಸ್ ಕೈಜೋಡಿಸಲಿವೆಯೇ ಎಂಬ ಬಗ್ಗೆ ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಹೇಳಿದೆ.