ದೇಶ

ಸಿಬಿಐ ಹೊಸ ನಿರ್ದೇಶಕರಾಗಿ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ನೇಮಕ

Srinivas Rao BV
ನವದೆಹಲಿ: ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಸಿಬಿಐ ಗೆ ನೂತನ ನಿರ್ದೇಶಕರನ್ನಾಗಿ ನೇಮಿಸಿದೆ. 
ಸಿಜೆಐ ಜಗದೀಶ್ ಸಿಂಗ್ ಖೇಹರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿ ಸಿಬಿಐ ನ ಮುಖ್ಯಸ್ಥರ ಹುದ್ದೆಗೆ ಅಲೋಕ್ ಕುಮಾರ್ ವರ್ಮಾ ಅವರ ಹೆಸರನ್ನು ಅಂತಿಮಗೊಳಿಸಿದೆ. 
ಡಿ.2 ರಂದು ಸಿಬಿಐ ನ ಮಾಜಿ ನಿರ್ದೇಶಕ ಅನಿಲ್ ಸಿನ್ಹಾ ಅವರು ನಿವೃತ್ತರಾದಾಗಿನಿಂದಲೂ ಸುಮಾರು ಒಂದು ತಿಂಗಳಿನಿಂದ ಸಿಬಿಐ ನಿರ್ದೇಶಕರ ಹುದ್ದೆ ತೆರವಾಗಿತ್ತು.  ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥನಾ ಅವರು ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ)ಯ ಹಂಗಾಮಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. 
1979ರ ಬ್ಯಾಚ್ ನ ಐಪಿಎಸ್ (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಕೇಂದ್ರಾಡಳಿತ ಪ್ರದೇಶದ ಕೇಡರ್) ಅಧಿಕಾರಿಯಾಗಿರುವ ಅಲೋಕ್ ವರ್ಮಾ 2016 ರ ಫೆ.29 ರಂದು ದೆಹಲಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. 
SCROLL FOR NEXT