ಲಖನೌ(ಉತ್ತರಪ್ರದೇಶ): ಸಮಾಜವಾದಿ ಪಕ್ಷ(ಎಸ್ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನಿಷ್ಠಾವಂತ ಅಂಬಿಕಾ ಚೌಧರಿ ಅವರು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸಮ್ಮುಖದಲ್ಲಿ ಬಿಎಸ್‌ಪಿಯನ್ನು ಸೇರಿದ್ದಾರೆ.
ಸಮಾಜವಾದಿ ಪಕ್ಷದ ಎಲ್ಲಾ ಪದವಿಗಳಿಗೆ ರಾಜಿನಾಮೆ ನೀಡಿದ್ದು ಮನಪೂರ್ವಕವಾಗಿ ಬಿಎಸ್‌ಪಿ ಪಕ್ಷವನ್ನು ಸೇರಿದ್ದೇನೆ. ಇನ್ನು ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡ ಮಾಯಾವತಿ ಅವರಿಗೆ ಅಂಬಿಕಾ ಚೌಧರಿ ಧನ್ಯವಾದಗಳನ್ನು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ಪಕ್ಷ ಹೊಡೆದು ಓಳಾಗಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಂದೆ ಸಮಾಜವಾದಿ ಪಕ್ಷ(ಎಸ್ಪಿ)ದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ತಾವು ಪಕ್ಷ ಬದಲಿಸಲು ಕಾರಣವಾಗಿದೆ ಎಂದರು.
ಮುಂದಿನ ತಿಂಗಳು ಉತ್ತರಪ್ರದೇಶ ಚುನಾವಣೆ ನಡೆಯಲಿದ್ದು ಸಮಾಜವಾದಿ ಪಕ್ಷದ ಜಟಾಪಟಿ ಇತರೇ ಪಕ್ಷಗಳಿಗೆ ವರದಾನವಾಗಿ ಪರಿಣಮಿಸಿದೆ.