ದೇಶ

ಪಂಜಾಬ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಅರುಣ್ ಜೇಟ್ಲಿ

Srinivas Rao BV
ಜಲಂಧರ್: ಕೇಂದ್ರ ಹಣಕಾಸು ಸಚಿವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಮ್ಮ ಪ್ರಣಾಳಿಕೆ ಮೂಲಸೌಕರ್ಯ ಹಾಗೂ ಸಾಮಾಜಿಕ ಉನ್ನತಿಯ ಆಧಾರದಲ್ಲಿವೆ ಎಂದು ಹೇಳಿದ್ದಾರೆ. 
ಏಕ್ ಪರಿವಾರ್, ಏಕ್ ರೋಜ್ಗಾರ್ (ಒಂದು ಪರಿವಾರ, ಒಂದು ಉದ್ಯೋಗ) ಯೋಜನೆಯನ್ನು ಜಾರಿಗೆ ತರುವ ಭರವಸೆ ನೀಡಿರುವ ಬಿಜೆಪಿ, ಬಡತನ ರೇಖೆಗಿಂತ ಕೆಳಗಿರುವವರಿಗೆ( ಬ್ಲೂ ಕಾರ್ಡ್ ಕಾರ್ಡು ಹೊಂದಿರುವವರಿಗೆ) 2 ಕೆಜಿ ತುಪ್ಪ, 5 ಕೆಜಿ ಸಕ್ಕರೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. 
ಬಡ ಹೆಣ್ಣು ಮಕ್ಕಳಿಗೆ ಪಿಹೆಚ್ ಡಿ ವರೆಗೂ ಉಚಿತ ವಿದ್ಯಾಭ್ಯಾಸ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವುದು ಹಾಗೂ ಸರ್ಕಾರಿ ನೌಕರರ ನಿವೃತ್ತಿಯನ್ನು 60 ವರ್ಷಗಳಿಗೆ ಏರಿಸುವ ಭರವಸೆಯನ್ನೂ ಪ್ರಣಾಳಿಕೆಯಲ್ಲಿ ನೀಡಲಾಗಿದೆ.  
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಶೈಕ್ಷಣಿಕ ಕ್ಷೇತ್ರದತ್ತ ಹೆಚ್ಚು ಗಮನ ಕೇಂದ್ರೀಕರಿಸಿದಂತಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆಯ 5 ಸ್ನಾತಕೋತ್ತರ ಇನ್ಸ್ಟಿಟ್ಯೂಟ್ ಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇವೆಲ್ಲದರ ಜೊತೆಗೆ  ಭಯೋತ್ಪಾದನೆಯಿಂದ ಅಪಾಯ, ಸಂಕಷ್ಟಗಳನ್ನು ಎದುರಿಸಿದ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪಂಜಾಬ್ ನ ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಕಮಲ್ ಶರ್ಮಾ ಹೇಳಿದ್ದಾರೆ. 
SCROLL FOR NEXT